ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಪೂರಕ: ಜಿಲ್ಲಾಧಿಕಾರಿದೇಶವು ಗುಡಿ ಕೈಗಾರಿಕೆಗಳಿಗೆ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ ವಿಶ್ವದ ವಿವಿಧೆಡೆ ಮಾಡುತ್ತಿದ್ದ ರಫ್ತುಗಳ ಅವಲೋಕಿಸಿದರೆ, ಶೇ.50ಕ್ಕೂ ಹೆಚ್ಚು ಪ್ರಮಾಣ ರಫ್ತು ಇರುತ್ತಿತ್ತು. ಆದರೆ, ಬ್ರಿಟಿಷರು ದೇಶಕ್ಕೆ ಕಾಲಿಟ್ಟ ನಂತರ ಗುಡಿ ಕೈಗಾರಿಕೆಗಳು ನಶಿಸುತ್ತಾ ಬಂದವು. ಹತ್ತಿ ಬಟ್ಟೆ, ಕರಕುಶಲ ವಸ್ತುಗಳು, ಆಭರಣ ಹೀಗೆ ನಾನಾ ಗುಡಿ ಕೈಗಾರಿಕೆಗಳಿದ್ದರೂ ಬ್ರಿಟಿಷರು ಕಾಲಿಟ್ಟ ನಂತರ ಗುಡಿ ಕೈಗಾರಿಕೆಗಳು ನಶಿಸಿ, ಕುಶಲಕರ್ಮಿಗಳ ಕೆಲಸಕ್ಕೂ ಸಂಕಷ್ಟ ಬಂದೊದಗಿತು.