ಕೊಳೆಗೇರಿ ಜನರ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುದಾನ ಘೋಷಿಸಿಲ್ಲ: ಎಸ್.ಎಲ್.ಆನಂದಪ್ಪಪ್ರತಿ ಬಜೆಟ್ನಲ್ಲಿ ಸ್ಲಂ ನಿವಾಸಿಗಳ ನಿರೀಕ್ಷೆಯಾದ ವಸತಿ ಹಕ್ಕು ಖಾತ್ರಿ, ಸ್ಲಂ ಅಭಿವೃದ್ಧಿ ಮಸೂದೆ, ಕೊಳೆಗೇರಿ ಜನಸಂಖ್ಯೆಗೆ ಅನುಗುಣವಾಗಿ ಪಾಲು, ಲ್ಯಾಂಡ್ ಬ್ಯಾಂಕ್ ನೀತಿ, ನಿವೇಶನ ರಹಿತರ ಸಮಸ್ಯೆ, ನಗರ ಉದ್ಯೋಗ ಖಾತರಿ, ಹಕ್ಕುಪತ್ರ ಮತ್ತು ಕ್ರಮ ಪತ್ರಗಳ ತ್ವರಿತ ನೋಂದಣಿಗಳ ಬಗ್ಗೆ ಉಲ್ಲೇಖವಿರಲೆಂಬ ಸ್ಲಂ ಜನಾಂದೋಲನದ ಮನವಿ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ.