ಅಂತರ್ಜಲ ಮಟ್ಟ ಕುಸಿತದಿಂದ ಕಂಗಾಲಾದ ರೈತರುಪ್ರತಿ ದಿನವು 28ರಿಂದ 30 ಕೊಳವೆ ಬಾವಿಗಳ ಕೊರೆವ ಲಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಒಂದು ಅಡಿಗೆ ₹ 100ಯಿಂದ ₹120 ಆದರೆ, ಸಾವಿರ ಅಡಿಯ ನಂತರ ಕೊರೆಸಿದರೆ ಒಂದು ಅಡಿಗೆ ₹250ರಿಂದ 350ರು.ಗಳ ಕೊಡಬೇಕಿದೆ. ಕೆಲವು ರೈತರು ಈಗಾಗಲೇ ಟ್ಯಾಂಕರ್ ಗಳ ಮೂಲಕ ತೋಟಗಳಿಗೆ ನೀರು ಹಾಯಿಸುತ್ತಿದ್ದು, ಒಂದು ಟ್ಯಾಂಕರ್ ನೀರಿಗೆ ₹1,400ರಿಂದ 1,500 ರುಪಾಯಿ ಕೊಟ್ಟು ಅಡಿಕೆ ಗಿಡಗಳಿಗೆ ನೀರುಣಿಸುವ ಸ್ಥಿತಿ ನಿರ್ಮಾಣವಾಗಿದೆ.