ಹರಪನಹಳ್ಳಿಗೆ ಕೇಂದ್ರ ರಿಸರ್ವ್ ಬೆಟಾಲಿಯನ್ ತರುವ ಗುರಿ: ಗಾಯತ್ರಿರಾಜ್ಯದ 12 ಕೆಎಸ್‌ಆರ್‌ಪಿ ತುಕಡಿಗಳ ಹೊರತಾಗಿ ಕಾನೂನು, ಸುವ್ಯವಸ್ಥೆ ನಿಭಾಯಿಸಲು ಎರಡು ಇಂಡಿಯಾ ರಿಸರ್ವ್ ಬೆಟಾಲಿಯನ್ ಸ್ಥಾಪಿಸುವ ಪ್ರಸ್ತಾವನೆ ಕೇಂದ್ರ ಗೃಹ ಸಚಿವಾಲಯದ ಹಂತದಲ್ಲಿದೆ. ಹರಪನಹಳ್ಳಿಯಲ್ಲಿ ಬೆಟಾಲಿಯನ್ ಸ್ಥಾಪಿಸುವ ಸಂಸದ ಜಿ.ಎಂ.ಸಿದ್ದೇಶ್ವರ ಪ್ರಯತ್ನವನ್ನು ಸಾಕಾರಗೊಳಿಸುವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹರಪನಹಳ್ಳಿಯಲ್ಲಿ ಭರವಸೆ ನೀಡಿದ್ದಾರೆ.