ಆಮ್ಲಜನಕ ನೀಡುವ ಗಿಡಮರಗಳ ಬೆಳೆಸಿ: ಡಾ.ವೀರೇಶ್ಪೊಲೀಸ್ ಠಾಣೆ, ಕೋರ್ಟ್, ಆಸ್ಪತ್ರೆಗಳೂ ಪರಿಸರದ ವ್ಯಾಪ್ತಿಯಲ್ಲಿ ಬರುತ್ತವೆ. ಬರೀ ಪಾಠ ಓದಿದರೆ ಸಾಲದು, ಅದರ ತಿರುಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಕೃತಿಯಲ್ಲಿ ಜಾರಿಗೆ ತಂದಾಗ ಮಾತ್ರ ಮನುಷ್ಯರ ಜೀವನ ಸಾರ್ಥಕವಾಗುತ್ತದೆ. ಪರಿಸರದಲ್ಲಿ ಗಿಡಮರಗಳು ಕೊಡುವ ಆಕ್ಸಿಜನ್‌ನಿಂದ ಸಮಾಜ ಆರೋಗ್ಯವಾಗಿರುತ್ತದೆ. ಉಚಿತವಾಗಿ ಆಕ್ಸಿಜನ್ ಕೊಡುವ ಗಿಡ ಮರಗಳನ್ನು ಉಳಿಸಿ ಬೆಳೆಸಬೇಕು.