ಶಾಲೆ-ಕಾಲೇಜಿನಲ್ಲಿ ಆಪ್ತ ಸಮಾಲೋಚನೆ ಕೇಂದ್ರ ತೆರೆಯಲಿ: ಡಾ. ಆನಂದ ಪಾಂಡುರಂಗಿಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳು ಅಪರಿಮಿತವಾಗಿದ್ದು ಮಕ್ಕಳ ಮೇಲೆ ಒತ್ತಡ ಗಣನೀಯವಾಗಿದೆ. ಆ ಭಾರವನ್ನು ತಗ್ಗಿಸುವ ಹೊಣೆ, ಎಲ್ಲರದ್ದಾಗಿದೆ. ಅಂಕಗಳೇ ಮಕ್ಕಳ ಪ್ರತಿಭೆಯ ಅಳತೆಗೋಲಲ್ಲ. ಅಂಕಗಳ ಹೊರತಾಗಿಯೂ, ಬದುಕಿನಲ್ಲಿ ವಿಶೇಷವಾದದ್ದನ್ನು ಸಾಧಿಸಿದ, ಅನೇಕರು ನಮ್ಮ ಸಮಾಜವನ್ನು ಬೆಳಗಿದ್ದಾರೆ.