ದಸರಾ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರುಬೆಲೆ ಏರಿಕೆ ಬಿಸಿ ಮಧ್ಯೆ ಜನರು ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ, ಹಬ್ಬದ ತಯಾರಿ ನಡೆಸಿದ್ದಾರೆ. ನಗರದ ಸೂಪರ್ ಮಾರ್ಕೆಟ್, ಅಕ್ಕಿಪೇಟೆ, ನೆಹರು ಮಾರುಕಟ್ಟೆ, ಸುಭಾಷ್ ರಸ್ತೆ, ಟಿಕಾರೆ ರಸ್ತೆ, ಗಾಂಧಿ ಚೌಕ ಸೇರಿದಂತೆ ವಿವಿಧ ಕಡೆಗಳಲ್ಲಿ ಹಬ್ಬದ ಪೂಜೆಗಾಗಿ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದ ದೃಶ್ಯ ಕಂಡು ಬಂತು.