ರೈತ ಹೋರಾಟಗಾರ ಖಂಡೇಶ್ವರ ವಿಧಿವಶಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ಹಿರಿಯರು, ಪ್ರಗತಿಪರ ರೈತರು, ರೈತ ಹೋರಾಟಗಾರ ಖಂಡೇಶ್ವರ ಬಸವಂತಪ್ಪ ನರೇಂದ್ರ (ಈಳಿಗೇರ) (80) ಗುರುವಾರ ನಿಧನರಾದರು.ಎಂಜಿನಿಯರಿಂಗ್ ಪದವಿ ಪಡೆದಿದ್ದ ಅವರು, ಕೃಷಿಕರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಅಂದಿನ ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ಎಚ್.ಎಸ್. ರುದ್ರಪ್ಪ, ಪುಟ್ಟಣ್ಣಯ್ಯ ಅವರ ಜತೆ ರೈತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಒಂದು ಬಾರಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತದಲ್ಲಿ ರೈತ ಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.