ವಿಧಾನಪರಿಷತ್ ಸದಸ್ಯರಿಗೂ ಸೂಕ್ತ ಅನುದಾನ ನೀಡಿಎಂಎಲ್ಎ ಗಳಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ನೂರು- ಐನೂರು ಕೋಟಿ ಅನುದಾನ ನೀಡಲಾಗುತ್ತದೆ. ಅದೇ ನಮಗೆ (ಮೇಲ್ಮನೆ ಸದಸ್ಯರು) ಕೇವಲ ಎರಡು ಕೋಟಿ ಮಾತ್ರ ಕೊಡ್ತಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ನಾವೂ ಕೂಡಾ ಒಬ್ಬ ಅಭಿವೃದ್ಧಿ ಕಾರ್ಯ ಮಾಡುವವರು. ಆದರೆ, ಸೂಕ್ತ ಅನುದಾನ ಇಲ್ಲದಿದ್ದರೆ ಹೇಗೆ ಕೆಲಸ ಮಾಡುವುದು.... ವಿಧಾನಪರಿಷತ್ ಬಿಜೆಪಿ ಸದಸ್ಯ ಶಾಂತಾರಾಮ್ ಸಿದ್ಧಿ ಅವರ ಅಸಹಾಯಕ ಮಾತುಗಳಿವು.