ಸಂಘಟನೆಗಳಲ್ಲಿ ಆಡಳಿತಾತ್ಮಕ, ಆರ್ಥಿಕ ಶಿಸ್ತು ಮುಖ್ಯ- ಷಡಾಕ್ಷರಿಸಂಘಟನೆಯಲ್ಲಿ ಆಡಳಿತಾತ್ಮಕ ಶಿಸ್ತು, ಆರ್ಥಿಕ ಶಿಸ್ತು ಅತೀ ಮುಖ್ಯವಾಗಿದೆ. ಸಂಘಟನೆಗಳನ್ನು ಪ್ರತಿಯೊಬ್ಬರು ತಮ್ಮ ಸ್ವಂತ ಮನೆಯಂತೆ ಬೆಳೆಸಬೇಕು ಅಂದಾಗ ಮಾತ್ರ ಸಂಘಟನೆ ಬೆಳೆಯಲು, ಉಳಿಯಲು ಸಾಧ್ಯವಿದೆ. ಸಂಘಟನೆಯು ಶಕ್ತಿಯುತವಾಗಿ ಇದ್ದಾಗ ಮಾತ್ರ ನಮ್ಮ ನೌಕರರು ನಿರ್ಭಿತಿಯಿಂದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ನೌಕರ ಸಂಘದ ರಾಜಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.