ಸೋಲಾರ್ ಪಾರ್ಕ್‌ನಿಂದ ರೈತರ ಜಮೀನಿಗೆ ನೀರು, ಲಕ್ಷಾಂತರ ಹಾನಿನಮ್ಮ ಜಮೀನಿನಲ್ಲಿ ತೂಗರಿ ಬೆಳೆ, ಈರುಳ್ಳಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಉತ್ತಮವಾಗಿ ಬೆಳೆದಿತ್ತು. ಆದ್ರೆ ಮಳೆಯಿಂದ ಸೋಲಾರ್ ಪಾರ್ಕ್‌ನಲ್ಲಿ ಸಂಗ್ರಹವಾಗುವ ನೀರು ನಮ್ಮ ಜಮೀನಿನಲ್ಲಿ ನುಗ್ಗಿದ ಪರಿಣಾಮ ವಿವಿಧ ಬೆಳೆ ಹಾನಿಯಾಗಿದ್ದು, ಅಂದಾಜು 8 ಲಕ್ಷ ರು. ಮೌಲ್ಯದ ಬೆಳೆ ಹಾನಿಯಾಗಿದ್ದು, ಕಂಪನಿಯವರು ಪರಿಹಾರ ನೀಡಬೇಕೆಂದು ಡಂಬಳ ಗ್ರಾಮದ ರೈತ ಮಂಜುರಡ್ಡಿ ಶಿವಪುತ್ರಪ್ಪ ಗಡಗಿ ಒತ್ತಾಯಿಸಿದ್ದಾರೆ.