ಮಸೀದಿ ಮೇಲಿನ ಮೈಕ್ ಸೌಂಡ್ ಕಡಿಮೆ ಮಾಡಿಸಿ: ರಾಜು ಖಾನಪ್ಪನವರಕಾನೂನು ಸಚಿವ ಎಚ್.ಕೆ. ಪಾಟೀಲ ಮೊದಲು ಕಾನೂನು ಪಾಲಿಸಬೇಕು. ಗಣೇಶ ವಿಸರ್ಜನೆ ವೇಳೆ ಎಸ್ಪಿ ಆದಿಯಾಗಿ ಪೊಲೀಸ್ ಇಲಾಖೆ ಸಮಯಕ್ಕೆ ಸರಿಯಾಗಿ ಡಿಜೆ ಬಂದ್ ಮಾಡಿಸಿದ್ದಾರೆ. ಆದರೆ, ಪ್ರತಿ ದಿನ ನಸುಕಿನ ಜಾವ 5 ಗಂಟೆಗೆ ಮಸೀದಿ ಮೇಲಿನ ಮೈಕ್ ಬಂದ್ ಮಾಡಿಸುವ ಕೆಲಸವೂ ಆಗಬೇಕು. ಸುಪ್ರೀಂ ಕೋರ್ಟ್ ಆದೇಶ ಕೇವಲ ಹಿಂದೂಗಳ ಧಾರ್ಮಿಕ ಹಬ್ಬಗಳಿಗೆ ಮಾತ್ರ ಅನ್ವಯ ಆಗುವುದಿಲ್ಲ. ಎಲ್ಲ ಧರ್ಮಗಳಿಗೆ ಅನ್ವಯಿಸಬೇಕು ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಆಗ್ರಹಿಸಿದರು.