ಸಮರ್ಪಕ ಬಸ್ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆಹೊಳೆನರಸೀಪುರ ಪಟ್ಟಣದಿಂದ ಎಸ್.ಅಂಕನಹಳ್ಳಿ, ಆಲಗೌಡನಹಳ್ಳಿ, ಚಿಕ್ಕಕಾಡನೂರು, ಸಿ.ಹಿಂದಲಹಳ್ಳಿ, ದಾಳಗೌಡನಹಳ್ಳಿ, ಮೂಡಲಕೊಪ್ಪಲು, ಕಲ್ಲಹಳ್ಳಿ, ಹಳ್ಳಿಮೈಸೂರು ಮಾರ್ಗ ಮತ್ತು ಪಟ್ಟಣದಿಂದ ದೊಡ್ಡಕಾಡನೂರು, ನಗರನಹಳ್ಳಿ ಮಾರ್ಗವಾಗಿ ಗ್ರಾಮೀಣ ಸಾರಿಗೆ ಬಸ್ಸುಗಳೇ ಇಲ್ಲ. ಈ ಭಾಗದ ವಿದ್ಯಾರ್ಥಿಗಳು ಹೋಬಳಿ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಿಗೆ ವ್ಯಾಸಂಗ ಮಾಡಲು ದಿನನಿತ್ಯ ನೂರಾರು ವಿದ್ಯಾರ್ಥಿಗಳು ತೆರಳುತ್ತಿದ್ದು, ಬಸ್ಸುಗಳಿಲ್ಲದೆ ಶಾಲಾ ಕಾಲೇಜುಗಳಿಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಬರುತ್ತಿದ್ದ ಬಸ್ಸುಗಳನ್ನು ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.