ಆಚಾರಿ ಎನ್ನುವುದು ವಿಶ್ವಕರ್ಮರ ಖ್ಯಾತ ನಾಮಪದಆಚಾರಿ ಎಂದರೆ ತಪ್ಪು ಭಾವನೆ ಕಲ್ಪನೆ ಮಾಡಿಕೊಳ್ಳುವ ಅಗತ್ಯವಿಲ್ಲ. ವಿಶ್ವಕರ್ಮ ಜನಾಂಗದವರು ಸಮಾಜದಲ್ಲಿ ಅವರಿವರ ಜಾತಿ, ಶ್ರೀಮಂತ, ಬಡವರು ಎಂದೆಣಿಸದೆ ಪ್ರತಿಯೊಬ್ಬರಿಗೂ ಹಲವು ರೂಪದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ವಿಶ್ವಕರ್ಮರ ನೆನಪಿಗಾಗಿ ಪಟ್ಟಣದಲ್ಲಿ ಐತಿಹಾಸಿಕ ಸ್ಥಳ ಗುರುತು ಮಾಡಬೇಕು, ಆಕಾರೋ ಆಗಮಾರ್ತಂಡ, ಚಾಕಾರೋ ದೇವತೋತ್ಪತ್ತಿ, ರಿಕಾರೋ ಶಾಸ್ತ್ರ ಕೋವಿದ, ಆಚಾರಿ ಅಕ್ಷರತ್ರಯಂ ಎಂಬಂತೆ, ಆಚಾರಿ ಎಂದರೆ ಮೂರು ವಿಷಯಗಳ ಬಲ್ಲ ಪಾರಂಗತರು ಎಂದು ದೇವರಾಜಪುರ ಹರಿಕಥಾ ವಿದ್ವಾನ್ ಮಲ್ಲೇಶಚಾರ್ ತಿಳಿಸಿದರು.