ಕಾಡಾನೆಗಳ ಅಲೆದಾಟದಿಂದ ಅರೆ ಮಲೆನಾಡಿಗರಿಗೆ ಸಂಕಟಕಾಡಾನೆ ಹಿಂಡು ಜಮೀನಲ್ಲಿ ಅಡ್ಡಾದಿಡ್ಡಿ ಓಡಾಡುವುದರ ಮೂಲಕ ಬೆಳೆನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಅರೆಮಲೆನಾಡಿನ ಬಿಕ್ಕೋಡು ಗ್ರಾಮದ ತಾವರೆಕೆರೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಕಾಡಾನೆ ಹಿಂಡು, 3 ಮರಿಗಳ ಸಮೇತ ಕೆರೆಯಲ್ಲಿ ಚಿನ್ನಾಟವಾಡಿ ಮೋಜು ಅನುಭವಿಸಿದೆ. ಬಿಕ್ಕೋಡು ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡು ಈ ಭಾಗದಲ್ಲಿ ಸಂಚರಿಸುತಿದ್ದು ಜೋಳ, ಬಾಳೆ, ಭತ್ತ, ಶುಂಠಿ, ಕಾಫಿ, ಅಡಿಕೆ ಬೆಳೆಗಳನ್ನು ನಾಶ ಮಾಡುತ್ತಿವೆ. ರಾತ್ರಿ ವೇಳೆ ನಿಡುಮನಹಳ್ಳಿ, ಜಗಬೋರನಹಳ್ಳಿ ಸುತ್ತಮುತ್ತಲಿನ ಗ್ರಾಮದ ರೈತರ ಬೆಳೆಗಳನ್ನು ತಿಂದು ನಾಶಪಡಿಸಿ ನಂತರ ಪಕ್ಕದಲ್ಲಿರುವ ತಾವರೆಕೆರೆಯಲ್ಲಿ ವಿಹಾರ ಮಾಡುತ್ತವೆ.