ಪರಿಸರ ಸ್ನೇಹಿ ವಸ್ತುಗಳಿಂದ ಗಣಪ ಮೂರ್ತಿ ತಯಾರಿಕೆ ಎಸ್.ಆರ್.ಎಸ್ ಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳು ವಿವಿಧ ಆಕೃತಿಯ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ವೈವಿಧ್ಯಮಯ ವಸ್ತುಗಳಾದ ಜೇಡಿಮಣ್ಣು, ವಿವಿಧ ಬಗೆಯ ಕಾಳುಗಳು, ಧಾನ್ಯಗಳು, ವಿವಿಧ ಸಸ್ಯ ಮತ್ತು ಮರಗಳ ಎಲೆಗಳು, ಅನುಪಯುಕ್ತ ಕಾಗದಗಳು, ಕೊಬ್ಬರಿ, ವಿವಿಧ ತರಕಾರಿ ಹಾಗೂ ಹಣ್ಣುಗಳ ಸಿಪ್ಪೆಗಳು ಮತ್ತು ಇತರೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಸುಮಾರು ೪೦೦ಕ್ಕೂ ಹೆಚ್ಚು ವಿವಿಧ ಮಾದರಿಯ ಗಣೇಶನ ಮೂರ್ತಿಗಳನ್ನು ತಮ್ಮಲ್ಲಿರುವ ಕೌಶಲ್ಯದ ಮೂಲಕ ಸೃಜನಾತ್ಮಕವಾಗಿ ತಯಾರಿಸಿ ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ಗಣೇಶನ ಮೂರ್ತಿಗಳನ್ನು ಶಾಲಾ ಸಭಾಂಗಣದಲ್ಲಿ ಅಲಂಕಾರಿಕವಾಗಿ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿ ವಿದ್ಯಾರ್ಥಿಗಳಿಗೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು.