ಇನ್ನೂ ಮಳೆ ಬರಲಿದ್ದು ಹೆಚ್ಚಿನ ಅನಾಹುತವಿದೆಇನ್ನೂ ಮಳೆ ಇದೆ, ಅದರಲ್ಲೂ ಇನ್ನೂ ಹೆಚ್ಚಿನ ಅನಾಹುತ ಸಂಭವಿಸುತ್ತವೆ ಎಂದಿರುವ ಕೋಡಿಶ್ರೀ, ಈ ಹಿಂದೆ "ಜನ ಇದ್ದ ಇದ್ದಂಗೆಯೇ ಸಾಯುತ್ತಾರೆ, ಭೂಮಿ ಬಿರುಕು ಬಿಡುತ್ತೆ ಎಂದಿದ್ದೆ, ಗುಡ್ಡ ಜಾರಿ ಹೋಗುತ್ತೆ ಎಂದು ಹೇಳಿದ್ದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಅನೇಕ ಪ್ರದೇಶ ಮುಳುಗುತ್ತವೆ ಎಂದೂ ಹೇಳಿದ್ದೆ. ಕರ್ನಾಟಕದಲ್ಲಿ ವರ್ಷಧಾರೆಯಿಂದ ಅವಘಡ ಘಟಿಸಲಿವೆ ಎಂದು ಹೇಳಿದ್ದೆ. ಅನೇಕ ಕಡೆಗಳಲ್ಲಿ ಅವು ಘಟಿಸುವೆ ಎಂದು ಹೇಳುವ ಮೂಲಕ ತಾವಾಡಿದ ಭವಿಷ್ಯ ನಿಜವಾಗಿದೆ " ಎಂದು ನುಡಿದರು. ಒಂದು ಆಕಾಶ ತತ್ವದ ಪ್ರಕಾರ ತೊಂದರೆ ಆಗಬಹುದು. ಅದು ರಾಜನ ಮೇಲೆ ಭಂಗ ಬೀರಲಿದೆ ಎಂದರು.