ಹೊಳೆನರಸೀಪುರದಲ್ಲೂ ರಾಮ ಹನುಮನಾಮ ಜಪವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಶ್ರೀ ಹನುಮ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು, ಸಾವಿರಾರು ಜನರು ಶ್ರೀರಾಮನಿಗೆ ಜಯಘೋಷಗಳನ್ನು ಕೂಗುತ್ತಾ ಮೆರವಣಿಗೆಗೆ ವಿಶೇಷ ಮೆರಗು ತಂದರು. ಶ್ರೀ ಹನುಮ ಜಯಂತ್ಯುತ್ಸವ ಪ್ರಯುಕ್ತ ಪಟ್ಟಣವನ್ನು ತಳಿರು, ತೋರಣ ಹಾಗೂ ಕೇಸರಿ ಧ್ವಜಗಳಿಂದ ಸಿಂಗರಿಸಿ, ಮೈಸೂರು ದಸರಾದಂತೆ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.