ಗಾಣಿಗ ಸಮುದಾಯದಿಂದ ಶನಿದೇವರ ವೈಭವದ ಉತ್ಸವಚನ್ನರಾಯಪಟ್ಟಣದ ಬಾಗೂರು ರಸ್ತೆಯಿಂದ ಪ್ರಾರಂಭಗೊಂಡ ಶನಿದೇವರ ಮೂರ್ತಿ ಹೊತ್ತ ಬೆಳ್ಳಿರಥ ಕೆ. ಆರ್. ವೃತ್ತ, ಹಳೇ ಬಸ್‌ನಿಲ್ದಾಣ, ಆಂಜನೇಯಸ್ವಾಮಿ ದೇವಸ್ಥಾನದ ಮಾರ್ಗವಾಗಿ ಕೋಟೆ ಬೀದಿ, ಹೊಸ ಬಸ್ ನಿಲ್ದಾಣದ ವರೆಗೆ ಚಂಡೆ, ವಾದ್ಯಗೋಷ್ಠಿ, ಮಹಿಳೆಯರಿಂದ ಭದ್ರಕಾಳಿ, ವೀರಭದ್ರನ ಕುಣಿತ, ಲಂಬಾಣಿ ಕುಣಿತ, ಚಂಡೆವಾದ್ಯ, ಮಂಗಳವಾದ್ಯದೊಂದಿಗೆ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಶೃಂಗರಿಸಲಾಗಿತ್ತು. ಗಾಣಿಗರ ಶ್ರೀ ಶನಿದೇವರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಕಡೇ ಶನಿವಾರದ ಅಂಗವಾಗಿ ಶ್ರೀ ಶನಿದೇವರ ವೈಭವದ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.