ಬಿಜೆಪಿ ಮುಖಂಡ ನಟೇಶ್ ಕುಮಾರ್‌ಗೆ ನುಡಿನಮನಕೆಲ ದಿನಗಳ ಹಿಂದಷ್ಟೇ ಅಗಲಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಹಾಸನ ಜಿಲ್ಲಾ ಬಿಜೆಪಿ ಮಾಜಿ ಸಂಘಟನಾ ಪ್ರಧಾನ ಕಾರ್ಯದರ್ಶಿ ನಟೇಶ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಸಾಮಾನ್ಯರು ಸುಂದರ ಜಗತ್ತಿನಲ್ಲಿ ಬದುಕುತ್ತಾರೆ. ಆದರೆ, ಶ್ರೇಷ್ಠರು ತಾನು ಬದುಕಿದ ಸಮಾಜವನ್ನು, ಜಗತ್ತನ್ನು ಸುಂದರವಾಗಿಸುತ್ತಾರೆ. ಹಾಗೆಯೇ ನಟೇಶ್ ಅವರು ತಾನು ಬದುಕಿದ ಸಮಾಜವನ್ನು, ಜಗತ್ತನ್ನು ಸುಂದರವಾಗಿಸಿದ್ದಾರೆ ಎಂದು ಜನಸೇವಾ ಶಿಕ್ಷಣದ ಮುಖಂಡ ನಿರ್ಮಲ್ ಕುಮಾರ್ ಅವರು ಹೇಳಿದರು.