• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಕಲೇಶಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಸಕಲೇಶಪುರ ಪುರಸಭೆ ಚುನಾವಣೆಯ ವೇಳೆ ಪಕ್ಷೇತರ ಸದಸ್ಯರ ಬೆಂಬಲ ಗಳಿಸುವ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜ್ಯೋತಿ ರಾಜ್‌ಕುಮಾರ್ ೧೫ ಮತಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಇವರ ಎದುರಾಳಿ ಅನ್ನಪೂರ್ಣ ಐದು ಮತ ಗಳಿಸಲಷ್ಟೆ ಶಕ್ತವಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಝರೀನಾ ೧೫ ಮತ ಪಡೆಯುವ ಮೂಲಕ ಉಪಾಧ್ಯಕ್ಷರಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೇಶ್ಮಾಭಾನು ಐದು ಮತ ಪಡೆದು ಸೋಲು ಅನುಭವಿಸಿದರು. ಬಿಜೆಪಿ ಸದಸ್ಯರು ಚುನಾವಣೆಯಿಂದ ದೂರ ಉಳಿಯುವ ಮೂಲಕ ಮೈತ್ರಿಧರ್ಮ ಪಾಲನೆಗೆ ಎಳ್ಳುನೀರು ಬಿಟ್ಟರು.
ಭಗವದ್ಗೀತೆ ಸಾರಾಂಶ ಅರ್ಥ ಮಾಡಿಕೊಂಡರೆ ಜೀವನ ಸುಂದರ
ಶ್ರೀಕೃಷ್ಣನು ಮಹಾಭಾರತದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಸಾರಾಂಶವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಲ್ಲಿ ಸುಂದರವಾದ ಜೀವನವನ್ನು ಅನುಭವಿಸಲು ಸಾದ್ಯವಾಗುತ್ತದೆ ಎಂದು ತಹಸೀಲ್ದಾರ್ ಸಂತೋಷ್‌ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಮದ-ಮತ್ಸರಗಳನ್ನು ನಿಗ್ರಹಿಸಿಕೊಂಡು ಧರ್ಮವಾದ ಮಾರ್ಗದಲ್ಲಿ ಬದುಕು ಸಾಧಿಸುವುದೇ ಶ್ರೀ ಕೃಷ್ಣನ ಸಂದೇಶವಾಗಿದ್ದು, ಭಗವದ್ಗೀತೆಯಲ್ಲಿ ಹೇಳಿರುವ ಮನುಷ್ಯನು ಧರ್ಮವಾಗಿ ಬದುಕುವ ರೀತಿಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಬ್ಬಿನ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ
ಚನ್ನರಾಯಪಟ್ಟಣದ ಮಕಾನ್ ಬಳಿ ಕಬ್ಬು ತುಂಬಿದ ಡಬಲ್ ಟ್ರೈಲರ್‌ ಹೊಂದಿರುವ ಹೊರ ರಾಜ್ಯದ ಟ್ರ್ಯಾಕ್ಟರ್‌ನಿಂದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಸರಬರಾಜು ಮಾಡಲು ಟ್ರ್ಯಾಕ್ಟರ್ ತೆರಳುತ್ತಿತ್ತು. ಇದೇ ಸಂದರ್ಭದಲ್ಲಿ ಬೈಕಿನಿಂದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ದೊಡ್ಡತರಹಳ್ಳಿ ಗ್ರಾಮದ ಯುವಕ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಹಿಂಬದಿಗೆ ಬೈಕಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಅಪಾರ ಗಾಯಗಳಾಗಿವೆ.
ಭಗವದ್ಗೀತೆ ಶ್ರೀಕೃಷ್ಣನ ಅಮೂಲ್ಯ ಕೊಡುಗೆ
ಅರಸೀಕೆರೆ ನಗರದ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಚೈತನ್ಯ ಕಶ್ಯಪ್ ಮಾತನಾಡಿ, ಭಗವದ್ಗೀತೆ ಕುರಿತು ಮಾತನಾಡಲು ಎಷ್ಟು ದಿನಗಳಾದರೂ ಸಮಯ ಸಾಲದು. ಅಂತಹ ಮಹಾ ಗ್ರಂಥ ನಮ್ಮದಾಗಿದೆ. ಶ್ರೀ ಕೃಷ್ಣನ ಕೊಡುಗೆ ಅಪಾರ ಎಂದರು. ಮಕ್ಕಳು ರಾಧಾ ಮತ್ತು ಕೃಷ್ಣ ವೇಷಧಾರಿಗಳಾಗಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಎಲ್ಲ ಮೆಚ್ಚುಗೆಗೆ ಪಾತ್ರರಾದರು.
ಆಲೂರು ಪಟ್ಟಣ ಪಂಚಾಯತ್‌ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಕೈಗೆ
ಆಲೂರು ಪಟ್ಟಣ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ, ಭಾರಿ ಹೈ ಡ್ರಾಮ ನೆಡೆದು ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ ತಾಹಿರಾಬೇಗಂ, ಇಬ್ಬರು ಪಕ್ಷೇತರ ಸದಸ್ಯರು, ಇಬ್ಬರು ಬಿಜೆಪಿ ಸದಸ್ಯರು, ಓರ್ವ ಜೆಡಿಎಸ್ ಸದಸ್ಯೆ ಸೇರಿದಂತೆ ಸಂಸದರ 1 ಮತ ಸೇರಿ ಒಟ್ಟು 7 ಮತಗಳನ್ನು ಪಡೆದು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ ಪಿ ರಾಣಿ ಅವರನ್ನು ಪರಾಭವಗೊಳಿಸಿ ಅಧ್ಯಕ್ಷ ಸ್ಥಾನಕ್ಕೇರಿದರು.ಆಲೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬಹುಮತವಿದ್ದರೂ ಮೈತ್ರಿ ಕೂಟ ಸಮನ್ವಯ ಸಾಧಿಸಲು ವಿಫಲವಾಗದ ಹಿನ್ನೆಲೆಯಲ್ಲಿ, ಮೈತ್ರಿಯ ಒಳ ಜಗಳದಿಂದ ಕೇವಲ ಒಬ್ಬರೇ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಮಾಡಿದ ಆಪರೇಷನ್ ಕಾಂಗ್ರೆಸ್‌ಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ತೀವ್ರ ಮುಖಭಂಗ ಅನುಭವಿಸಬೇಕಾಯಿತು.
ಶ್ರೀ ಶಾರದಾ ಪಬ್ಲಿಕ್ ಸ್ಕೂಲ್‌ಗೆ ಸಮಗ್ರ ಪ್ರಶಸ್ತಿ
ಹಳೇಬೀಡು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಿ. ವಲಯದಿಂದ ಶ್ರೀ ಶಾರದಾ ಪಬ್ಲಿಕ್ ಸ್ಕೂಲಿನ ಮಕ್ಕಳು ಚಾಂಪಿಯನ್ನಾಗಿ ಹೊರ ಹೊಮ್ಮಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ. ಖೋ-ಖೋ, ಥ್ರೋಬಾಲ್, ಕಬ್ಬಡಿಯಲ್ಲಿ ಪ್ರಥಮ ಸ್ಥಾನ, ೬೦೦ ಮೀಟರ್ ರನ್ನಿಂಗ್‌ನಲ್ಲಿ ತನ್ಮಯಿ ಪ್ರಥಮ ಸ್ಥಾನ ,೪೦೦ ಮೀಟರ್ ರನ್ನಿಂಗ್‌ನಲ್ಲಿ ರಕ್ಷಿತಾ ಎಚ್.ಎಲ್ ಪ್ರಥಮ ಸ್ಥಾನ, ೨೦೦ ಮೀಟರ್ ರನ್ನಿಂಗ್‌ನಲ್ಲಿ ರಕ್ಷಿತಾ ಪ್ರಥಮ, ತನ್ಮಯಿ ,ದ್ವಿತೀಯ ಸ್ಥಾನ. ರಿಲೇ ಪ್ರಥಮ ಸ್ಥಾನ, ಲಾಂಗ್ ಜಂಪ್ ಲಿಖಿತ ದ್ವಿತೀಯ, ಮೇಘನಾ ತೃತೀಯ ಸ್ಥಾನ, ಶಾಟ್‌ಪುಟ್ ಖುಷಿ ದ್ವಿತೀಯ ಸ್ಥಾನ, ಡಿಸ್ಕಸ್ ಥ್ರೋ ಖುಷಿ ಪ್ರಥಮ ಸ್ಥಾನ ಪಡೆದಿದ್ದು, ಬಾಲಕಿಯರ ಚಾಂಪಿಯನ್‌ಶಿಪ್ ರಕ್ಷಿತಾ ಎಚ್ ಎಲ್ ಅವರಿಗೆ ಸಿಕ್ಕಿತು.
ಗರ್ಭಿಣಿಯರಿಗೆ ಸೀಮಂತ ಮಾಡಿದ ವೈದ್ಯಾಧಿಕಾರಿ ಮಮತಾ
ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಮತಾರವರು ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಿ ಹೆರಿಗೆ ಮತ್ತು ಹೆರಿಗೆಯ ನಂತರ ತಾಯಿ ಮಗುವಿನ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆಗಳನ್ನುನೀಡಿದರು. ನಂತರ ಸೀಮಂತ ಕಾರ್ಯಕ್ರಮ ಏರ್ಪಡಿಸಿ ಸುಮಾರು 26 ತುಂಬು ಗರ್ಭಿಣಿಯರಿಗೆ ಮನೆಯಲ್ಲಿ ನೆರವೇರಿಸುವ ರೀತಿಯಲ್ಲಿ ಸಿಹಿ ತಿಂಡಿಗಳನ್ನು ಹಂಚಿ ಅರಿಶಿಣ ಕುಂಕುಮದ ಜೊತೆಗೆ, ಬಳೆ ಹಾಗು ಸೀರೆಯೊಂದಿಗೆ ಮಡಿಲು ತುಂಬಿಸಿ ಎಲ್ಲರಿಗೂ ಶುಭ ಹಾರೈಸಿದರು.
ಕಾಡಾನೆಗಳಿಂದ ಅಪಾರ ಬೆಳೆ ಹಾನಿ
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಬಕ್ರವಳ್ಳಿ, ಮೊಗಸಾವರ ‌ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡು ಕಳೆದ ಒಂದು ವಾರದಿಂದ ಬೀಡು ಬಿಟ್ಟು ಕೃಷಿಕರ ಮತ್ತು ಕಾಫಿ ಬೆಳೆಗಾರರ ಬೆಳೆಗಳನ್ನು ಹಾನಿ ಮಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು‌ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಬಕ್ರವಳ್ಳಿ ಗ್ರಾಮದ ನಂದೀಶ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಪೃಥ್ವಿ ಅವರ ತೋಟಗಳಿಗೆ ಭುವನೇಶ್ವರಿ ಹೆಸರಿನ ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾಫಿ, ಮೆಣಸು ಹಾಗೂ ಗೇಟ್, ಪೈಪ್‌ಲೈನ್‌ಗಳನ್ನು ತುಳಿದು ಸಂಪೂರ್ಣ ಹಾನಿ ಮಾಡಿವೆ.
ಮೊಸರಿನ ಮಡಿಕೆ ಒಡೆದ ಪುಟಾಣಿಗಳು
ಶ್ರೀ ಕೃಷ್ಣ ಗೋಕುಲಾಷ್ಟಮಿಯ ಅಂಗವಾಗಿ ನಗರದ ಬಿ ಎಚ್ ರಸ್ತೆ ಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆಯಲ್ಲಿ ವಿದ್ಯಾರ್ಥಿ ಚಿಣ್ಣರು ಕೃಷ್ಣ ವೇಷಧಾರಿಯಾಗಿಯೂ ಬಾಲಕಿಯರು ರಾಧಾ ವೇಷಧಾರಿಯಾಗಿ ಎಲ್ಲರ ಗಮನವನ್ನು ಸೆಳೆದರು. ಶಾಲಾ ಆವರಣದಲ್ಲಿ ಎರಡು ಮೊಸರಿನ ಮಡಿಕೆಗಳನ್ನು ನೇತು ಹಾಕಿ ಚಿಣ್ಣ ಕೃಷ್ಣರು ಅದನ್ನು ಒಡೆಯುವುದು ಮತ್ತು ಸಖಿಯರ ನರ್ತನ ಕಣ್ಮನ ಸೆಳೆದವು. ವಿದ್ಯಾರ್ಥಿನಿಯೊಬ್ಬಳ ತಾಯಿಯೂ ಕೂಡ ಈ ನೃತ್ಯ ರೂಪಕದಲ್ಲಿ ರಾಧಾ ವೇಷಧಾರಿಯಾಗಿ ನರ್ತಿಸಿದರು.
ಮಡಬಲಿನ ಶಿಕ್ಷಕ ಪರಮೇಶ್‌ಗೆ ಆದರ್ಶ ಶಿಕ್ಷಕ ಪ್ರಶಸ್ತಿ
ಪರಮೇಶ್ ವೃತ್ತಿಯಲ್ಲಿ ಶಿಕ್ಷಕರಾಗಿ ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯದ ಹವ್ಯಾಸವನ್ನು ಮೈಗೂಡಿಸಿಕೊಂಡಿದ್ದು,, ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಲೇಖನಗಳು, ವೈಜ್ಞಾನಿಕ ಲೇಖನಗಳು, ವಿಮರ್ಶಾ ಲೇಖನಗಳು, ಕಥೆ, ಕವಿತೆಗಳನ್ನು ಬರೆದಿದ್ದಾರೆ. ಈಗಾಗಲೇ ಎಂಟು ಮೌಲ್ಯಯುತ ಕೃತಿಗಳನ್ನು ಹೊರತಂದಿದ್ದಾರೆ. ಶಿಕ್ಷಣ ಇಲಾಖೆಯ ಹಲವು ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಶೈಕ್ಷಣಿಕ ಹಾಗೂ ಸಾಹಿತ್ಯಾತ್ಮಕ ಕಾರ್ಯವನ್ನು ಪರಿಗಣಿಸಿ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
  • < previous
  • 1
  • ...
  • 218
  • 219
  • 220
  • 221
  • 222
  • 223
  • 224
  • 225
  • 226
  • ...
  • 416
  • next >
Top Stories
ಪಿಯುಸಿ ಮತ್ತೆ ಫೇಲಾಯ್ತಾ? ಜೂ.9ರಿಂದ ಮತ್ತೆ ಪ್ರಯತ್ನಿಸಿ
ಆಪರೇಷನ್‌ ಸಿಂದೂರ ನಿಲ್ಲಿಸಬಾರದಿತ್ತು : ಸಿಎಂ
ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ : ಮೇ 21ರವರೆಗೆ ಯೆಲ್ಲೋ ಅಲರ್ಟ್‌
ಬಳ್ಳಾರಿ ಬಿಜೆಪೀಲಿ ಈಗ ಘಟಾನುಘಟಿಗಳೇ ಇಲ್ಲಾರಿ!
ಎಸ್ಸಿ ಒಳಮೀಸಲು ಸಮೀಕ್ಷೆ 1 ವಾರ ವಿಸ್ತರಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved