ಅತಿಯಾದ ಸಂಪತ್ತು ಆರೋಗ್ಯವನ್ನು ಹಾಳು ಮಾಡುತ್ತದೆಸಂಪತ್ತು ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯವೇ ಸಂಪತ್ತು ಎಂಬುದನ್ನು ಗಮನದಲ್ಲಿಟ್ಟುಕೊಂಡು ಜೀವನ ನಡೆಸಬೇಕು ಎಂದು ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟರು. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ನೂತನ ಅವಿಷ್ಕಾರಗಳು ಬರುತ್ತಿವೆ. ಎಲ್ಲ ರೋಗಕ್ಕೂ ಉತ್ತಮವಾದ ಚಿಕಿತ್ಸೆ ಇದೆ. ಪರಿಸರ ನಾಶ, ವಿಷಗಾಳಿ, ನೀರು ಕಲುಷಿತ, ಆಹಾರ ಬೆಳೆಯುವ ಮಣ್ಣಿಗೆ ಅತಿಯಾಗಿ ರಸಾಯನಿಕ ಬಳಕೆ, ಎಲ್ಲ ವಸ್ತುಗಳಲ್ಲೂ ಕಲಬೆರಕೆಯಿಂದ ಆರೋಗ್ಯ ಹಾಳಾಗಲು ಕಾರಣವಾಗುತ್ತಿದೆ ಎಂದರು.