ಆಲೂರಲ್ಲಿ ಯುವಕರ ಬಳಗದಿಂದ ಸ್ವಾತಂತ್ರ್ಯೋತ್ಸವಆಲೂರು ಪಟ್ಟಣದ ಯಡೂರು ಕ್ರಾಸ್ ರಸ್ತೆ ಬಳಿ ಇರುವ ಎಫ್.ಎಂ ಚಿಕನ್ ಸೆಂಟರ್ ಆವರಣದಲ್ಲಿ ಯುವಕರ ಬಳಗದ ಚೇತನ್ ಹಾಗೂ ನವಾಜ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಟಿ ಮಲ್ಲೇಶ್ ಮಾತನಾಡಿದರು. ಭಾರತ ದೇಶ ಅನೇಕ ಭಾಷೆ, ಧರ್ಮ ಅನೇಕ ಜಾತಿಗಳಿಂದ ಕೂಡಿದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶದಲ್ಲಿ ಕೋಮುವಾದ, ಭ್ರಷ್ಟಾಚಾರ, ಜಾತಿ ಸೇರಿದಂತೆ ಅನಿಷ್ಟ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸಬೇಕಾಗಿದೆ. ಮಕ್ಕಳಿಗೆ ದೇಶಾಭಿಮಾನ ಬೆಳೆಸಲು ರಾಷ್ಟ್ರನಾಯಕರ, ಮಹಾನ್ ಪುರುಷರ , ಶರಣರ, ದಾರ್ಶನಿಕರ ಜೀವನ ಆಧಾರಿತ ವಿಷಯ ಹೇಳಬೇಕು ಎಂದು ಹೇಳಿದರು.