ನಾಳೆಯಿಂದ ರಾಜ್ಯಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿವಿಜಯನಗರದಲ್ಲಿರುವ ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆ ಆವರಣದಲ್ಲಿ ಟೈಮ್ಸ್ ಗ್ರೂಪ್ ಆಫ್ ಇನ್ಟಿಟ್ಯೂಟ್ ಸಂಯುಕ್ತಾಶ್ರಯದಲ್ಲಿ ಜ.೨೨ರಿಂದ ಜ.೨೬ರವರೆಗೂ ರಾಜ್ಯ ಮಟ್ಟದ ಲೆದರ್ ಬಾಲ್ ಮಹಿಳಾ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ಟೈಮ್ಸ್ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು. ಈ ಕ್ರೀಡೆಗೆ ರಾಜ್ಯದ ವಿವಿಧ ಭಾಗಗಳಿಂದ ಎಂಟು ತಂಡಗಳು ಭಾಗವಹಿಸಲಿದೆ. ಮೈಸೂರಿನಿಂದ ಇಂದು ತಂಡ, ಬೆಂಗಳೂರಿನಿಂದ ಎರಡು ತಂಡ, ಹಾಸನದಿಂದ ಒಂದು ತಂಡ, ಶಿವಮೊಗ್ಗ ಒಂದು, ಹುಬ್ಬಳಿಯಿಂದ ಹಾಗೂ ವಿಜಯಪುರ, ಬ್ರಹ್ಮಾವರದಿಂದ ಒಂದೊಂದು ತಂಡ ಪಾಲ್ಗೊಳ್ಳಲಿದೆ ಎಂದರು.