• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸ್ವಾಭಿಮಾನಿ ಸಮಾವೇಶಕ್ಕೆ ಸಚಿವರಿಂದ ಸಿದ್ಧತೆಗಳ ಪರಿಶೀಲನೆ
ಎಸ್‌ ಎಂ ಕೃಷ್ಣ ನಗರದಲ್ಲಿ ಡಿಸೆಂಬರ್ ೫ರಂದು ಹಮ್ಮಿಕೊಂಡಿರುವ ಕಾಂಗ್ರೆಸ್‌ನ ಸ್ವಾಭಿಮಾನಿ ಸಮಾವೇಶದ ಹಿನ್ನೆಲೆಯಲ್ಲಿ ಎಸ್.ಎಂ. ಕೃಷ್ಣನಗರದಲ್ಲಿ ಸಚಿವರುಗಳಾದ ಕೆ.ಎನ್. ರಾಜಣ್ಣ, ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ, ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಪೂರ್ವಭಾವಿ ಸಭೆ ನಡೆಯಿತು. ಸಿದ್ದರಾಮಯ್ಯ ಹಾಗೂ ನಾವು ನಲವತ್ತು ವರ್ಷಗಳಿಂದ ಶೋಷಿತರು, ಹಿಂದುಳಿದ ವರ್ಗಗಳು ಮಾಡುವ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದೇವೆ. ಕೋಮುವಾದ, ಮತೀಯವಾದವನ್ನು ಸಂವಿಧಾನದವನ್ನು ಉಳಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಿರುಗಡಲಿನಲ್ಲಿ ಎರಡು ದಿನ ಪಂಚಲಿಂಗ ದರ್ಶನ
ತಲಕಾಡಿನಲ್ಲಿ ಪಂಚಲಿಂಗ ದರ್ಶನ ನಡೆಯುವ ದಿನದಂದೇ ತಾಲೂಕಿನ ಕಿರಗಡಲು ಗ್ರಾಮದಲ್ಲಿಯೂ ಪಂಚಲಿಂಗ ದರ್ಶನ ನಡೆಯಲಿದೆ. ಗ್ರಾಮದಲ್ಲಿ ಕಾರ್ತಿಕ ಶುದ್ಧ ನ.೩೦ ಮತ್ತು ಡಿ. ೧ರಂದು ನಡೆಯಲಿರುವ ಪಂಚಲಿಂಗ ದರ್ಶನ ಮತ್ತು ಜಾತ್ರೆಗೆ ಅದ್ಧೂರಿ ಸಿದ್ಧತೆ ನಡೆದಿದೆ. ಈ ಗ್ರಾಮದ ಪಂಚಲಿಂಗಗಳು ಚೋಳರ ಕಾಲದ್ದವೆಂದು ಹಿರಿಯರು ಹೇಳುತ್ತಾರೆ. ಗ್ರಾಮದಲ್ಲಿರುವ ನಾಲ್ಕು ನೂರಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮಸ್ಥರಿಗೆ ಪಂಚಲಿಂಗಗಳೆ ಆರಾಧ್ಯ ದೈವ.
ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಕಲ್ಪಿಸುವ ಅವಶ್ಯಕತೆ ಇದೆ
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳನ್ನು ಸರಿಸಾಟಿಯಾಗಿ ತಯಾರು ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ಹೇಳಿದರು. ಅಚೀವರ್ಸ್ ಪ್ರಜ್ಞಾ ಕಾಲೇಜಿನಲ್ಲಿ ಡಿಜಿಟಲ್ ಕ್ಲಾಸ್‌ರೂಮನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಮುಂದಿನ ಭವಿಷ್ಯಕ್ಕಾಗಿ ಸಿದ್ಧಗೊಳಿಸುವುದು ಶಿಕ್ಷಣ ಸಂಸ್ಥೆಗಳ ಗುರಿಯಾಗಬೇಕು, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಕಲ್ಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ತಂತ್ರಜ್ಞಾನದ ವಿಕಾಸದೊಂದಿಗೆ, ಶೈಕ್ಷಣಿಕ ಸಾಮರ್ಥ್ಯಗಳು ಪ್ರತಿದಿನ ಬೆಳೆಯುತ್ತಿವೆ ಮತ್ತು ಬದಲಾಗುತ್ತಿವೆ ಎಂದರು.
ವಳಲಹಳ್ಳಿ ಗ್ರಾಪಂ ಅಧ್ಯಕ್ಷರಿಂದ ಹಣ ದುರುಪಯೋಗ ಆರೋಪ
ವಳಲಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು ಕಾಮಗಾರಿ ಹೆಸರಿನಲ್ಲಿ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಹಣ ಮಂಜೂರು ಮಾಡಿಸಿಕೊಂಡಿದ್ದು, ಇದು ಸಾಬೀತಾಗಿದೆ. ಹಾಗಾಗಿ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಸದಸ್ಯರೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಗ್ರಾ.ಪಂ ಸದಸ್ಯ ವಳಲಹಳ್ಳಿ ಸುದರ್ಶನ್ ಹೇಳಿದರು. ಇನ್ನೊಂದು ವಾರದ ಒಳಗೆ ಅಧ್ಯಕ್ಷರು ರಾಜೀನಾಮೆ ಕೊಡದಿದ್ದಲ್ಲಿ ನಾವೇ ರಾಜೀನಾಮೆ ಕೊಡುತ್ತೇವೆ ಎಂದರು. ಅಧ್ಯಕ್ಷರು ರಾಜೀನಾಮೆ ನೀಡುವ ಮುಖಾಂತರ ನಮಗೆ ಸಹಕರಿಸಲಿ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಪರಿಕಲ್ಪನೆ ಕರ್ನಾಟಕದಲ್ಲಿ ಮಾತ್ರ
ಇಡೀ ದೇಶದಲ್ಲಿ ಯಾವ ರಾಜ್ಯದಲ್ಲಿ ಇಲ್ಲದಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಪರಿಕಲ್ಪನೆ ಕರ್ನಾಟಕದಲ್ಲಿ ಮಾತ್ರ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಶ್ಲಾಘನೆ ವ್ಯಕ್ತಪಡಿಸಿದರು. ಗಣಿತಶಾಸ್ತ್ರದ ಪ್ರಾಧ್ಯಾಪಕ ವಾಸುದೇವ್ ಅವರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದನ್ನು ಸ್ವಾಗತಿಸುತ್ತೇನೆ. ಸುಮ್ಮನೆ ಅನುಷ್ಠಾನಕ್ಕಾಗಿ ಯೋಜನೆಗಳಲ್ಲ. ಅನುಷ್ಠಾನದಿಂದ ಆಗುವ ಪ್ರಯೋಜನಗಳು ಸಂಗತಿ ಬಗ್ಗೆ ಮನಸ್ಸಿನಲ್ಲಿಟ್ಟುಕೊಂಡು ಯೋಚನೆ ಮಾಡಬೇಕು. ಯಾವ ಜಿಲ್ಲೆಯಲ್ಲಿಯೂ ಇಲ್ಲದಿರುವ ಕ್ರಿಯಾಶೀಲತೆ ಹಾಸನ ಜಿಲ್ಲೆಯ ಪದವಿಪೂರ್ವ ಶಿಕ್ಷಕ ಮಿತ್ರರಲ್ಲಿದೆ ಎಂದು ಹೇಳಿದರು.
ಶ್ರೀಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ
ಅರಸೀಕೆರೆ ಶ್ರೀಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಶುಕ್ರವಾರ ಸಂಜೆ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಶಾಸ್ತ್ರೋಕ್ತವಾಗಿ ಪೂಜೆ ಕಾರ್ಯವನ್ನು ನೆರವೇರಿಸುವ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು. ಮುಸ್ಲಿಂ ಜಮಾತ್ ಕಮಿಟಿಯಿಂದ ನಗರದ ಹುಳಿಯಾರ್ ವೃತ್ತಕ್ಕೆ ಶ್ರೀ ಪ್ರಸನ್ನ ಗಣಪತಿ ಮೆರವಣಿಗೆ ಆಗಮಿಸಿದಾಗ ಬೃಹತ್ ಬೃಹತ್ ಹೂವಿನ ಹಾರವನ್ನು ಸಮರ್ಪಿಸಿದರು. ಈ ಮೆರವಣಿಗೆಯಲ್ಲಿ ಕೀಲು ಕುದುರೆ ನರ್ತನ, ಡೊಳ್ಳು ಕುಣಿತ, ವೀರಭದ್ರ ದೇವರ ಕುಣಿತ, ಭದ್ರಕಾಳಿ ಕುಣಿತ, ರಾಣಿಬೆನ್ನೂರು ರೋಡ್ ಆರ್ಕೆಸ್ಟ್ರಾ, ಕಹಳೇ ವಾದ್ಯ, ನಂದೀಧ್ವಜ, ಕುಣಿತ ಹುಲಿವೇಶದ ಕುಣಿತ ಮನ ಸೆಳೆದವು.
ಡಿಸೆಂಬರ್‌ ಐದರ ಸಮಾವೇಶವನ್ನು ಎಐಸಿಸಿಯೇ ಒಪ್ಪಿಕೊಂಡಿದೆ : ಮಾಜಿ ಸಚಿವ ಬಿ. ಶಿವರಾಮ್

ಪಕ್ಷದ ಸಂಘಟನೆ ದೃಷ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡಿಸೆಂಬರ್‌ 5ರಂದು ನಡೆಸುತ್ತಿರುವ ಸಮಾವೇಶ ಸರ್ವ ಸಮ್ಮತದ್ದಾಗಿದೆ. ಆದರೆ, ಯಾರೋ ಕೆಲವರು ಎಐಸಿಸಿಗೆ ಪತ್ರ ಬರೆದಿದ್ದಾರೆ. ಆದರೆ, ಎಐಸಿಸಿ ಕೂಡ ಸಮಾವೇಶವನ್ನು ಒಪ್ಪಿಕೊಂಡಿದೆ.  

ಹಳ್ಳಿಗಳ ಸಮಸ್ಯೆ ಅರಿಯಲು ಸಮುದಾಯ ವಾಸ್ತವ್ಯ ಸಹಕಾರಿ
ಗ್ರಾಮೀಣ ಪ್ರದೇಶದಲ್ಲಿರುವ ನಾನಾ ಸಮಸ್ಯೆಗಳ ಅರಿವು ಮೂಡಿಸುವ ಕೆಲಸ ಸಮುದಾಯ ವಾಸ್ತವ್ಯ ಶಿಬಿರಗಳಿಂದ ಆಗಬೇಕಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಸಂಸ್ಕಾರ ಹಾಗೂ ಸಮಾಜ ಸೇವೆಯೆಂಬುದು ಪ್ರತಿಯೊಬ್ಬರ ಯಶಸ್ಸಿನ ದಾರಿಯಷ್ಟೇ ಅಲ್ಲದೆ ಶಿಕ್ಷಣದೊಂದಿಗೆ ಸಂಸ್ಕಾರ ಬಹುಮುಖ್ಯ. ಪ್ರತಿಯೊಬ್ಬ ವ್ಯಕ್ತಿಯೂ ಸೇವೆಯಲ್ಲಿ ಭಗವಂತನನ್ನು ಕಾಣುವಂತಾದಾಗ ಮಾತ್ರ ಆತ್ಮತೃಪ್ತಿ ಸಿಗುತ್ತದೆ. ಅಂತಹ ಆತ್ಮ ತೃಪ್ತಿಯನ್ನು ಕಂಡುಕೊಳ್ಳಲು ನಿಮಗೆ ಈ ಮೂರು ದಿನಗಳ ಶಿಬಿರ ಸಹಕಾರಿಯಾಗಲಿದೆ ಎಂದರು.
ನವಿಲೆ ನಾಗೇಶ್ವರ ಸ್ವಾಮಿಯ ವೈಭವದ ತೆಪ್ಪೋತ್ಸವ
ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ನಡೆಯಿತು. ದೇವಾಲಯದ ಪಕ್ಕದಲ್ಲಿರುವ ಪುರಾಣ ಪ್ರಸಿದ್ಧ ನವಿಲೆ ನಾಗೇಶ್ವರ ಸ್ವಾಮಿ ಕೆರೆಯಲ್ಲಿ ಶ್ರೀ ನಾಗೇಶ್ವರ ಸ್ವಾಮಿ ಅಮರಗಿರಿ ರಂಗನಾಥ ಸ್ವಾಮಿ ಹಾಗೂ ಕೆಂಪಮ್ಮ ದೇವಿಯವರ ವೈಭವದ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶಾಸಕ ಸಿ ಎನ್ ಬಾಲಕೃಷ್ಣ ನವಿಲೆ ನಾಗೇಶ್ವರ ಸ್ವಾಮಿ ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಗಂಗೆಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ, ನಂತರ ವಿಶೇಷ ತೆಪ್ಪೋತ್ಸವದಲ್ಲಿ ಪಾಲ್ಗೊಂಡರು.
ಅಂಧರಲ್ಲಿ ವಿಶೇಷ ಜ್ಞಾನ ಮತ್ತು ಕೌಶಲ್ಯವಿದೆ
ಪ್ರತಿಯೊಬ್ಬ ಅಂಧ ವ್ಯಕ್ತಿಯಲ್ಲೂ ವಿಶೇಷ ಜ್ಞಾನ ಮತ್ತು ಕೌಶಲ್ಯವಿದೆ. ಸಮಾಜದಲ್ಲಿ ಸಾಕಷ್ಟು ಅಂಧರು ತಮ್ಮ ವಿಶೇಷ ಕೌಶಲ್ಯ ಮತ್ತು ಪ್ರತಿಭೆಯಿಂದ ಸಾಧನೆ ಮಾಡಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ. ಸುಧೀರ್ ಬಿ ತಿಳಿಸಿದ್ದಾರೆ. ಅಂಧ ವಿಶೇಷ ಚೇತನರಿಗಾಗಿ ಏರ್ಪಡಿಸಿದ್ದ ಸ್ಥಳ ಪರಿಜ್ಞಾನ ಮತ್ತು ಚಲನ ವಲನ ೫ ದಿನದ ತರಬೇತಿ ಕಾರ್ಯಕ್ರಮದಲ್ಲಿ ೨೭ ಅಂಧ ವಿಶೇಷ ಚೇತನರು ಬಾಗವಹಿಸಿ ತರಬೇತಿ ಪಡೆದರು.
  • < previous
  • 1
  • ...
  • 230
  • 231
  • 232
  • 233
  • 234
  • 235
  • 236
  • 237
  • 238
  • ...
  • 510
  • next >
Top Stories
ನನಗೆ ಏಡ್ಸ್‌ ಬಂದಿಲ್ಲ: ಉಗ್ರ ಇಸ್ಲಾಂಮತ ಪ್ರಚಾರಕ ಝಾಕಿರ್‌ ನಾಯ್ಕ್‌
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಏಕೆ ಮತಾಂತರಗೊಳ್ಳುತ್ತಿದ್ದರು? : ಸಿದ್ದರಾಮಯ್ಯ
ವಿರೋಧ ನಡುವೆ ಇಂದು ಭಾರತ vs ಪಾಕ್‌ ಕ್ರಿಕೆಟ್‌
ವಿಜಯ್‌ ಚುನಾವಣಾ ರಣಕಹಳೆ - ಇಲ್ಲಿ ಶುರುವಾದ ರಾಜಕೀಯ ಕಾರ್ಯಕ್ಕೆ ಮಹಾ ತಿರುವು
ಕರ್ಕಿ ಸ್ತ್ರೀ ಸಬಲೀಕರಣದ ಪ್ರತೀಕ : ಪ್ರಧಾನಿ ಮೋದಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved