ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಾಳೆ ಹನುಮ ಜಯಂತಿನೂತನವಾಗಿ ಪ್ರತಿಷ್ಠಾಪಿಸಲ್ಪಟ್ಟಿರುವ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿ.೧೩ರಂದು ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಲಿವೆ. ಬೆಳಗ್ಗೆ ೭ರಿಂದ ಅಭಿಷೇಕ, ಮಹಾಪೂಜೆ ನಂತರ ೧೦ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ೧೧ ಗಂಟೆಗೆ ಸುಗಮ ಸಂಗೀತ ಏರ್ಪಡಿಸಲಾಗಿದ್ದು, ಪ್ರಸಾದ ವಿನಿಯೋಗದ ನಂತರ, ಸಂಜೆ ೪.೩೦ರಿಂದ ಶ್ರೀ ಸ್ವಾಮಿಯವರ ದಿವ್ಯ ಉತ್ಸವವು ಬೃಹತ್ ಮಂಟಪದ ಅಲಂಕಾರ ಮತ್ತು ಡಿಜೆ ಸೌಂಡ್ಸ್‌ನೊಂದಿಗೆ ಭಕ್ತರ ಸಮ್ಮುಖದಲ್ಲಿ ಪಟ್ಟಣದಲ್ಲಿ ನಡೆಯಲಿದೆ.