ಬೈಚನಹಳ್ಳಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮಕ್ಕಳಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮತ್ತು ನೋಟ್‌ಬುಕ್ ವಿತರಿಸುವುದು ಪುಣ್ಯದ ಕೆಲಸ. ಅವಕಾಶ ಇದ್ದಾಗ ಇಂತಹ ಕೆಲಸಗಳನ್ನು ಮಾಡಬೇಕು ಎಂದು ಶಾಸಕ ಎ.ಮಂಜು ತಿಳಿಸಿದರು. ಬೈಚನಹಳ್ಳಿ ಪ್ರೌಢಶಾಲೆ ಆವರಣದಲ್ಲಿ ಗಾಂಧಿನಗರ ದಿವಾಕರ್ ಅವರು ನೀಡಿರುವ ನೋಟ್‌ಬುಕ್, ನೀರು ಶುದ್ಧೀಕರಣ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ವಿಶೇಷ ಕಾರ್ಯಕ್ರಮ. ದಾನ ಮಾಡುವ ಚಿಂತನೆ, ಮನಸ್ಸು ಎಲ್ಲರಿಗೂ ಬರುವುದಿಲ್ಲ. ಗಾಂಧಿನಗರ ದಿವಾಕರ್ ಅವರು ಶಾಲಾ ಮಕ್ಕಳಿಗೆ ನೀರು ಶುದ್ಧೀಕರಣ ಯಂತ್ರ ಮತ್ತು 20 ಸಾವಿರ ನೋಟ್‌ಬುಕ್ ನೀಡುತ್ತಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.