• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹೊಳೆನರಸೀಪುರ ಮೆಟ್ರಿಕ್‌ ನಂತರದ ಹಾಸ್ಟೆಲ್‌ ವಾರ್ಡನ್‌ ವರ್ಗಾವಣೆ ಮಾಡಿ
ಹೊಳೆನರಸೀಪುರ ತಾಲೂಕಿನ ಸಮಾಜಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಬಾಲಕೀಯರ ವಿದ್ಯಾರ್ಥಿನಿಲಯ ಅವ್ಯವಸ್ಥೆ ಕೂಪವಾಗಿದೆ. ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಮತ್ತು ಕೊಠಡಿಗಳು ಸೇರಿದಂತೆ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಶೈಕ್ಷಣಿಕ ವಾತಾವರಣವಿಲ್ಲದೆ ಹೆಚ್ಚು ಸಮಸ್ಯೆಗಳನ್ನು ಪ್ರತಿನಿತ್ಯ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ನಿಲಯಪಾಲಕರಾದ ಚಂದ್ರಿಕಾರವರಿಗೆ ಹಲವು ಬಾರಿ ಬಗೆಹರಿಸುವಂತೆ ಒತ್ತಾಯಿಸಿದರೂ ಸಮಸ್ಯೆಗಳನ್ನು ಬಗೆಹರಿಸುವ ಬದಲು ಮಕ್ಕಳ ಮೇಲೆ ಧಮ್ಕಿ ಹಾಕಿ ಬೆದರಿಕೆ ದೌರ್ಜನ್ಯವೆಸಗುತ್ತಿದ್ದಾರೆ. ಈ ಹಾಸ್ಟೆಲ್ ವಾರ್ಡನ್‌ ಅವರನ್ನು ವರ್ಗಾವಣೆ ಮಾಡಿ ಹಾಸ್ಟೆಲ್‌ ವ್ಯವಸ್ಥೆ ಸುಧಾರಿಸುವಂತೆ ಎಸ್‌ಎಫ್ಐ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಾಮನ್‌ವೆಲ್ತ್ ಪವರ್ ಲಿಪ್ಟಿಂಗ್ ಸ್ಪರ್ಧೆ ತೆರಳು ಸಂತೋಷ್‌ ಶೆಟ್ಟಿಗೆ ಹಣಕಾಸಿನ ತೊಂದರೆ
ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್ ಕ್ರೀಡಾಪಟು ಸಂತೋಷ್ ಶೆಟ್ಟಿ ಕಾಮನ್‌ವೆಲ್ತ್ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಕಾಮನ್‌ವೆಲ್ತ್ ಪವರ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಆರ್ಥಿಕವಾಗಿ ಧನ ಸಹಾಯ ಮಾಡುವ ಮೂಲಕ ಕ್ರೀಡಾಪಟುವಿಗೆ ಸಹಕಾರ ನೀಡುವಂತೆ ಪವರ್‌ ಲಿಪ್ಟಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ನಿರಂಜನ್ ಅರಸು ಹಾಗೂ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್ ಕ್ರೀಡಾಪಟು ಸಂತೋಷ್ ಶೆಟ್ಟಿ ಮನವಿ ಮಾಡಿದರು.
ಕಸಾಯಿಖಾನೆ ಮೇಲೆ ಬೇಲೂರು ತಹಸೀಲ್ದಾರ್‌ ದಾಳಿ
ಬೇಲೂರು ಪುರಸಭೆ ವ್ಯಾಪ್ತಿಯ ಯಗಚಿ ನದಿ ದಂಡೆ ಬಳಿ ಇರುವ ಮುಸ್ತಫಾ ಬೀದಿ, ಪುರಿಭಟ್ಟಿ ಬೀದಿ ಸೇರಿದಂತೆ ಪುರಸಭೆಯ ೨೨ ಹಾಗೂ ೨೩ನೇ ವಾರ್ಡ್‌ನಲ್ಲಿ ರಾಜಾರೋಷವಾಗಿ ಗೋವುಗಳನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಿತ್ತು. ಈ ಮಾಹಿತಿ ಆಧರಿಸಿ ತಹಸೀಲ್ದಾರ್‌ ಎಂ ಮಮತಾ ಅವರು ಮಫ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹಾಗೂ ಪೊಲೀಸ್ ಪಿಎಸ್ಐ ಪ್ರವೀಣ್ ಕುಮಾರ್ ಹಾಗೂ ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಏಕಕಾಲಕ್ಕೆ ೫ ಮನೆಗಳ ಮೇಲೆ ದಾಳಿ ನೆಡೆಸಿ ಸುಮಾರು ೧೦ ಕ್ವಿಂಟಲ್ ಗೋಮಾಂಸ ವಶಪಡಿಸಿಕೊಂಡರು.
ಜೋಡಿ ತಿಪ್ಪನಹಳ್ಳಿಯಲ್ಲಿ ಕೋರಿಕೆ ಮೇರೆಗೆ ಬಸ್ ನಿಲುಗಡೆ
ಜೋಡಿ ತಿಪ್ಪನಹಳ್ಳಿಯಲ್ಲಿ ನಿಗಮದ ಚಿಕ್ಕಮಗಳೂರು ವಿಭಾಗೀಯ ವ್ಯವಸ್ಥಾಪಕರ ಆದೇಶದ ಮೇರೆಗೆ ಕೋರಿಕೆಯ ನಿಲುಗಡೆ ನೀಡಲಾಗುತ್ತಿದೆ. ಈ ಹಳ್ಳಿಗೆ ಸೇರಿದ ಸುಮಾರು ಹತ್ತು ಹದಿನೈದು ಹಳ್ಳಿಗಳ ಸೇರ್ಪಡೆಯಾದ ದೊಡ್ಡ ಕೇಂದ್ರ. ಈ ಸ್ಥಳದಲ್ಲಿ ಬಸ್ಸುಗಳನ್ನು ನಿಲ್ಲಿಸದೆ ಹಾಗೆ ಹೋಗುತ್ತಿದ್ದರು. ಈ ಭಾಗದ ರೈತಾಪಿ ಜನರಿಗೆ ತುಂಬಾ ತೊಂದರೆ ಆಗುತ್ತಿತ್ತು. ಅದರ ಜೊತೆಗೆ ಆಸ್ಪತ್ರೆಗೆ ಹೋಗುವ ಜನತೆಗೆ ತೊಂದರೆಯಾಗಿತ್ತು. ಸ್ವಂತ ಆಟೋ ಮಾಡಿಕೊಂಡು ಹೋಗಬೇಕಾಗಿತ್ತು. ಆದ ಕಾರಣ ಸ್ಥಳೀಯ ಮುಖಂಡರು ಬಂದು ನನ್ನನ್ನು ಸಂಪರ್ಕಿಸಿ ಈ ಸ್ಥಳದಲ್ಲಿ ಕೋರಿಕೆ ನಿಲ್ದಾಣ ಕೇಳಿದರು.
ಎಲ್‌ಐಸಿ 68ನೇ ವಾರ್ಷಿಕೋತ್ಸವ ಆಚರಣೆ
ಅರಸೀಕೆರೆ ಪಟ್ಟಣದಲ್ಲಿರುವ ಎಲ್ಐಸಿ ಶಾಖಾ ಕಚೇರಿಯಲ್ಲಿ ಆಯೋಜಿಸಿದ್ದ 68ನೇ ವಾರ್ಷಿಕೋತ್ಸವ ಹಾಗೂ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಸೆಪ್ಟೆಂಬರ್ ಒಂದರಿಂದ 9ನೇ ತಾರೀಕಿನವರೆಗೂ ಆಯೋಜಿಸಿರುವ ವಿಮಾ ಸಪ್ತಾಹದಲ್ಲಿ ಪ್ರತಿನಿಧಿಗಳಿಗೆ ಗ್ರಾಹಕರಿಗೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ವಿಮಾ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಆಯೋಜಿಸಿರುವ ವಿವಿಧ ಕ್ರೀಡೆಗಳು, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ, ಹಾಡುಗಾರಿಕೆ ಹಾಗೂ ಮ್ಯಾರಥಾನ್ ಮತ್ತು ಪ್ರತಿನಿಧಿಗಳ ಸಾಧನೆಗೆ ತಕ್ಕಂತೆ ಅವರಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ಜೀವ ವಿಮಾ ನಿಗಮ ಎಂದು ಶಾಖಾ ಪ್ರಬಂಧಕ ಬಲವಂತ ಮಾರುತಿ ಹೇಳಿದರು.
ಬೇಲೂರು: ಸರ್ಕಾರಿ ಹಾಸ್ಟೆಲಲ್ಲಿ ಮದ್ಯ, ಗಾಂಜಾ, ಸಿಗರೆಟ್‌ ಪತ್ತೆ! ಅಮಲಲ್ಲಿ ವಿದ್ಯಾರ್ಥಿಗಳು-ವಿಡಿಯೋ ವೈರಲ್‌

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಿಕ್ಕೋಡಿಯ ಮೆಟ್ರಿಕ್‌ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ಹಾಸ್ಟೇಲ್‌ನಲ್ಲಿ ಗಾಂಜಾ, ಬೀಡಿ, ಸಿಗರೇಟ್‌ ಸೇದುತ್ತಿರುವ ಹಾಗೂ ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ
ಅರಕಲಗೂಡು ತಾಲೂಕಿನ ಬೈಚನಹಳ್ಳಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕಸಬಾ 2 ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ ದೊರಕಿತು.ಬಾಲಕಿಯರ ವಿಭಾಗದ ರಿಲೇಯಲ್ಲಿ ಸೃಜನ, ಸಂಜು, ಸ್ವಪ್ನ ಕೀರ್ತನ ಇವರು ತಾಲೂಕು ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲಕರ ವಿಭಾಗದಲ್ಲಿ 200 ಮೀಟರ್ ಓಟದಲ್ಲಿ ಹೇಮಂತ್ ದ್ವಿತೀಯ ಸ್ಥಾನ, 600 ಮೀಟರ್ ಓಟದಲ್ಲಿ ದಿಲೀಪ್ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಆಯ್ಕೆ ಆಗಿರುತ್ತಾರೆ. ಹಾಗೆಯೇ ಥ್ರೋ ಬಾಲ್‌ನಲ್ಲೂ ಸಹ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚನ್ನರಾಯಪಟ್ಟಣದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ
ಛಾಯಾಗ್ರಹಕರ ಟ್ರಸ್ಟ್ ವತಿಯಿಂದ ಅನೇಕ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬರಲಾಗಿದೆ. ಅದರಂತೆ ಕೊರೋನಾ ಸಂದರ್ಭದಲ್ಲಿ ಛಾಯಾಗ್ರಾಹಕರಿಗೆ ಮತ್ತು ಕೆಲ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆಯ ಕಾರ್ಯವು ಕೂಡ ಮಾಡಿದೆ. ಜೊತೆಗೆ ಛಾಯಾಗ್ರಾಹಕರ ಕುಟುಂಬದವರು ಮರಣ ಹೊಂದಿದ್ದು, ಅವರ ಕುಟುಂಬಕ್ಕೆ ೧ ಲಕ್ಷ ರು. ಪರಿಹಾರ ಧನವನ್ನು ಸಹ ನೀಡಿಲಾಗಿದ್ದು, ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದಂತಹ ಹಿರಿಯ ಸದಸ್ಯರನ್ನು ಗೌರವಿಸುವ ಕಾರ್ಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯ ಇವುಗಳನ್ನು ನಿರ್ವಹಿಸುತ್ತಾ ಬಂದಿದೆ ಎಂದು ತಾಲೂಕು ಛಾಯಾಗ್ರಾಹಕರ ಟ್ರಸ್ಟ್ ಅಧ್ಯಕ್ಷ ನಂಜುಂಡಮೈಮ್ ಹೇಳಿದರು.
ಸಂಸ್ಕಾರ ಕಲಿಸಿದರೆ ಮಹನೀಯರನ್ನು ಕಾಣಬಹುದು
ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿದರು. ಗುರು, ತಂದೆ ತಾಯಿ ಕಲಿಸಿದ ಸಂಸ್ಕಾರ ಪ್ರತಿಯೊಬ್ಬ ವ್ಯಕ್ತಿ ಬಾಳಿ ಬದುಕಿ ಮಣ್ಣು ಸೇರುವವರೆಗೂ ಇರುತ್ತದೆ. ಸಂಸ್ಕಾರ ಇಲ್ಲದ ಬದುಕು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯಲಾರದು. ಹಾಗಾಗಿ ಪ್ರತಿಯೊಬ್ಬರ ಬದುಕಿನಲ್ಲಿ ಸಂಸ್ಕಾರ ಅಗತ್ಯ. ಸಂಸ್ಕಾರವಂತರು ಈ ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವರು ಎಂದರು.
ಅವೈಜ್ಞಾನಿಕ ಡೀಮ್ಡ್ ಅರಣ್ಯದ ಬಗ್ಗೆ ಪಶ್ಚಿಮಘಟ್ಟ ನಿವಾಸಿಗಳ ಸಭೆ
ಸಕಲೇಶಪುರ ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಡೀಮ್ಡ್ ಅರಣ್ಯದ ನೆಪ ಹೇಳಿ ರೈತರಿಗೆ ಕಿರುಕುಳ ನೀಡುತ್ತಿರುವ ಪ್ರಕರಣ ಹೆಚ್ಚುತ್ತಿದ್ದು ಇದನ್ನು ಸಹಿಸಲು ಇನ್ನೂ ಸಾಧ್ಯವಿಲ್ಲ. ಕುಡಿಯುವ ನೀರು ಯೋಜನೆ, ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ, ಸರ್ಕಾರದ ಅಭಿವೃದ್ಧಿ ಕೆಲಸ ಸಹ ಮಾಡಲು ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ತಾಲೂಕಿನ ಎಲ್ಲಾ ರೈತರು ಬೆಳೆಗಾರ ಸಂಘಟನೆಗಳು, ರಾಜಕೀಯ ಮುಖಂಡರು ಪರಿಸರವಾದಿಗಳು, ಶಾಸಕರ ನೇತೃತ್ವದಲ್ಲಿ ಪಕ್ಷಾತೀತವಾಗಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಎಚ್ ಎನ್ ವಿಶ್ವನಾಥ್ ತಿಳಿಸಿದರು.
  • < previous
  • 1
  • ...
  • 213
  • 214
  • 215
  • 216
  • 217
  • 218
  • 219
  • 220
  • 221
  • ...
  • 417
  • next >
Top Stories
ಪಿಯುಸಿ ಮತ್ತೆ ಫೇಲಾಯ್ತಾ? ಜೂ.9ರಿಂದ ಮತ್ತೆ ಪ್ರಯತ್ನಿಸಿ
ಆಪರೇಷನ್‌ ಸಿಂದೂರ ನಿಲ್ಲಿಸಬಾರದಿತ್ತು : ಸಿಎಂ
ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ : ಮೇ 21ರವರೆಗೆ ಯೆಲ್ಲೋ ಅಲರ್ಟ್‌
ಬಳ್ಳಾರಿ ಬಿಜೆಪೀಲಿ ಈಗ ಘಟಾನುಘಟಿಗಳೇ ಇಲ್ಲಾರಿ!
ಎಸ್ಸಿ ಒಳಮೀಸಲು ಸಮೀಕ್ಷೆ 1 ವಾರ ವಿಸ್ತರಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved