• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹುಟ್ಟೂರು ಕಾಳೇನಹಳ್ಳಿಹಟ್ಟಿ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡುತ್ತಿರುವ ನಟ ಡಾಲಿ ಧನಂಜಯ್

ಡಾಲಿ ಧನಂಜಯ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತನ್ನೂರಿನ ಶಾಲೆಗೆ ಕೊಡುಗೆ ನೀಡಲು ಮುಂದಾಗಿರುವ ಡಾಲಿ, ತನ್ನ ಊರಾದ ಕಾಳೇನಹಳ್ಳಿ ಹಟ್ಟಿಯ ಸರ್ಕಾರಿ ಶಾಲೆಯನ್ನು ಸುಮಾರು ಹತ್ತು ಲಕ್ಷ ರು. ವೆಚ್ಚದಲ್ಲಿ ಹೈಟೆಕ್‌ ಶಾಲೆ ಮಾಡುತ್ತಿದ್ದಾರೆ.

ಅರಕಲಗೂಡಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
ಶ್ರೀ ಧರ್ಮಸ್ಥಳ ಪಾದಯಾತ್ರೆ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಶಾಸಕ ಎ. ಮಂಜು ಜನರಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಿದರು. ಇದಕ್ಕೂ ಮುನ್ನ ದೊಡ್ಡಮ್ಮ ದೇವಸ್ಥಾನ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಜನರಿಗೆ ಅನ್ನದಾನ ಮಾಡಿ ಪಾದಯಾತ್ರೆ ಹೊರಟು ದೇವರಿಗೆ ಭಕ್ತಿ- ಭಾವ ಅರ್ಪಿಸುವುದು ಪುಣ್ಯದ ಕಾಯಕವಾಗಿದೆ ಎಂದರು.
ಇಂದಿನ ಮಹಿಳೆಯ ಎಲ್ಲಾ ಸಾಧನೆಗೆ ಸ್ಫೂರ್ತಿ ಸಾವಿತ್ರಿಬಾಯಿ ಫುಲೆ: ಉಪನ್ಯಾಸಕಿ ಸುಧಾ
ಈ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ನಗರದ ಪೆಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಆಚರಿಸಿತು. ಮಹಿಳೆಯರಿಗೆ ಇಷ್ಟು ಕಟ್ಟುಪಾಡುಗಳು ಕೇವಲ ಶತಮಾನದ ಹಿಂದೆ ಇತ್ತೇ ಎಂಬುದು ಆಶ್ಚರ್ಯ ಆಗುತ್ತದೆ. ಆಂಗ್ಲ ಆಳ್ವಿಕೆಯಲ್ಲಿ ಬಹಳ ನಿರ್ಲಕ್ಷ್ಯದಿಂದ ನಮ್ಮ ಶೈಕ್ಷಣಿಕ ಪರಿಸ್ಥಿತಿಯನ್ನು ಅವಹೇಳನ ಮಾಡುತ್ತಿದ್ದರು ಎಂದು ಸುಧಾ ಹೇಳಿದರು.
ಬೇಲೂರು ಬಸ್‌ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಶಾಸಕ ಕಿಡಿ
ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಎಚ್. ಕೆ. ಸುರೇಶ್ ಭೇಟಿ ನೀಡಿ ಡಿಪೋ ವ್ಯವಸ್ಥಾಪಕರನ್ನು ತರಾಟೆ ತೆಗೆದುಕೊಂಡರು. ಇಷ್ಟೆಲ್ಲಾ ಅವ್ಯವಸ್ಥೆಗೆ ಕಾರಣವಾಗಿರುವ ಅಧಿಕಾರಿಗಳ ತಲೆದಂಡ ಮಾಡಲು ಹಾಗೂ ಸಾರ್ವಜನಿಕರ ಜೊತೆ ಸ್ಪಂದಿಸದ ಡಿಪೋ ಮ್ಯಾನೇಜರ್ ಅವರನ್ನು ಕೂಡಲೇ ವರ್ಗಾವಣೆಗೊಳಿಸುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
ಶಾಸಕರಿಂದ ಹೆದ್ದಾರಿ ಕಾಮಗಾರಿ ಪರಿಶೀಲನೆ
ರಾಮನಾಥಪುರ- ಹೋಬಳಿ ಕೇರಳಾಪುರ ಗಡಿಯಿಂದ ಕೇರಳಾಪುರ, ಕಾಳೇನಹಳ್ಳಿ, ಬಸವಾಪಟ್ಟಣ, ರಾಮನಾಥಪುರ, ಕೊಣನೂರು, ಮಾರ್ಗ ಸೋಮವಾರಪೇಟೆಗೆ ಹೋಗುವ ರಸ್ತೆಯ ಬದಿಯಲ್ಲಿದ್ದ ದೇವಸ್ಥಾನಗಳ ಅಭಿವೃದ್ಧಿ ಹಾಗೂ ಬಸ್ ನಿಲ್ದಾಣಗಳು, ಉಳಿದಿರುವ, ರಾಮನಾಥಪುರ ಬಸವೇಶ್ವರ ಸರ್ಕಲ್‌ನಿಂದ ಅರಣ್ಯ ಗೇಟ್ ಭಾಗದವರೆಗೆ ಬಸವಾಪಟ್ಟಣ ಗ್ರಾಮದ ಮಧ್ಯ ಉಳಿದಿರುವ ಎಲ್ಲಾ ಕಾಮಗಾರಿಯ ಬಗ್ಗೆ ತುರ್ತಾಗಿ ಚರಂಡಿ ನಿರ್ಮಾಣದ ಬಗ್ಗೆ ಕೆಶಿಪ್ ಅಧಿಕಾರಿಗಳಿಗೆ ಶಾಸಕ ಮಂಜು ಸೂಚನೆ ನೀಡಿದರು.
ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ
ಸಾರ್ವಜನಿಕರು ಸಂಚಾರಿ ನಿಯಮಗಳು ಮತ್ತು ಸೂಚನೆಗಳನ್ನು ಪಾಲಿಸಿದಲ್ಲಿ ಬಹಳಷ್ಟು ಅಪಘಾತಗಳನ್ನು ತಡೆಯಬಹುದೆಂದು ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್ ತಿಳಿಸಿದರು. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಳಸಿಕೊಂಡು ತಪ್ಪೆಸಗುವುದೂ ಕೂಡ ಸೈಬರ್ ಕ್ರೈಮ್ ಅನ್ವಯ ಅಪರಾಧವಾಗುತ್ತದೆ. ಈಗ ಪೋಕ್ಸೋ ಕಾಯಿದೆ ಜಾರಿಗೆ ಬಂದಿದ್ದು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಯಾವುದೇ ವ್ಯಕ್ತಿಗೆ ಕಠಿಣ ಸಜೆಗೆ ಗುರಿ ಮಾಡಲಾಗುತ್ತದೆ. ಆದ್ದರಿಂದ ಹದಿಹರೆಯದ ವಯಸ್ಸಿನಲ್ಲಿರುವ ತಾವುಗಳು ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ತಮ್ಮ ಉಜ್ವಲ ಭವಿಷ್ಯ ನಾಶವಾಗುತ್ತದೆಂದು ಎಚ್ಚರಿಸಿದರು.
ಹಾಸನ : ಎಂಎಲ್‌ಸಿ ಸೂರಜ್‌ ರೇವಣ್ಣ ವಿರುದ್ಧ ಸಂಸದ ಶ್ರೇಯಸ್ ಎಂ. ಪಟೇಲ್ ತಿರುಗೇಟು

ಎರಡು ಮೂರು ಬಾರಿ ಸಚಿವರು, ಐದಾರು ಬಾರಿ ಶಾಸಕರಾಗಿರುವವರ ರೀತಿ ಮಾತನಾಡಿದ್ದಾರೆ. ಜೊತೆಗೆ ವಾಗ್ಮಿ, ದೊಡ್ಡ ಮೇಧಾವಿಗಳ ಥರ ಮಾತನಾಡಿದ್ದಾ   ಎಂದು ಎಂಎಲ್‌ಸಿ ಸೂರಜ್‌ ರೇವಣ್ಣ ವಿರುದ್ಧ ಸಂಸದ ಶ್ರೇಯಸ್‌ ಪಟೇಲ್‌ ವಾಗ್ದಾಳಿ ನಡೆಸಿದ್ದಾರೆ.

ಹೆತ್ತವರನ್ನು ಗುರು ಹಿರಿಯರನ್ನು ವಿದ್ಯಾರ್ಥಿಗಳು ಗೌರವಿಸಿ
ತಂದೆ, ತಾಯಿ ಗುರು- ಹಿರಿಯರನ್ನು ಗೌರವಿಸಬೇಕು. ನಿಮ್ಮ ಮಕ್ಕಳಿಗೆ ಉತ್ತಮ ವಿಚಾರವನ್ನು ತಿಳಿಸಿಕೊಟ್ಟು ಗುಣಮಟ್ಟ ಶಿಕ್ಷಣ ನೀಡಿ ಎಂದು ಹಿರಿಯ ಶಿಕ್ಷಕ ವೀರಭದ್ರಪ್ಪ ಬಿ.ಪಿ ಹೇಳಿದರು. ಬಸವಾಪಟ್ಟಣ ಸಮೀಪದ ಕೇರಳಾಪುರ ಗ್ರಾಮದ ಶ್ರೀವಿದ್ಯಾಗಣಪತಿ ಪ್ರೌಢಶಾಲೆಯಲ್ಲಿ ೧೯೯೩-೯೪ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಬಿ.ಜಿ.ಎಸ್ ಕಲ್ಯಾಣ ಮಂಟಪದಲ್ಲಿ ಗುರು ನಮನ ಕಾರ್ಯಕ್ರಮ ನಡೆಯಿತು.
ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಬೇಲೂರಿನಲ್ಲಿ ಸ್ವಾಗತ
ಮೈಸೂರಿನ ಸುತ್ತೂರು ಕ್ಷೇತ್ರದ ಶಿವರಾತ್ರಿಶ್ವರ ಶಿವಯೋಗಿ ಜಾತ್ರಾ ಮಹೋತ್ಸವ ಜ ೨೬ ರಿಂದ ೩೧ರ ತನಕ ನಡೆಯಲಿದ್ದು, ನಾಡಿನ ಭಕ್ತರು ಭಾಗವಹಿಸಲಿ ಎಂಬ ಉದ್ದೇಶದಿಂದ ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥ ವಿವಿಧ ಭಾಗದಲ್ಲಿ ಸಂಚರಿಸಿ, ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮಠದ ಅಭಿಮಾನಿಗಳು ಬರಮಾಡಿಕೊಂಡರು.
ಕಾಮಗಾರಿ ಚುರುಕುಗೊಳಿಸಲು ಡೀಸಿ ಸೂಚನೆ
ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಮಳೆಗಾಲದ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಸರ್ಕಾರದ ಮಾರ್ಗಸೂಚಿಯಂತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ವಿಪತ್ತು ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೂ ಕುಸಿತ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದರು.
  • < previous
  • 1
  • ...
  • 198
  • 199
  • 200
  • 201
  • 202
  • 203
  • 204
  • 205
  • 206
  • ...
  • 509
  • next >
Top Stories
ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಜಾತಿ ಸಮೀಕ್ಷೆಗೆ ಆನ್‌ಲೈನ್‌ನಲ್ಲೂ ಭಾಗಿ ಅವಕಾಶ
ರಾಜ್ಯದ ಉತ್ತರ ಒಳನಾಡಲ್ಲಿ ಮೂರು ದಿನ ಮಳೆ ಸಾಧ್ಯತೆ : ವಾಯುಭಾರ ಕುಸಿತ
ತಲೆಬುರುಡೆ ತಂದಿದ್ದು ವಿಠಲಗೌಡ: ಕೋರ್ಟಲ್ಲಿ ಸಾಕ್ಷ್ಯ
5 ತಿಂಗಳಿಂದ ಮದ್ಯ ಮಾರಾಟ ಕುಸಿತ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved