ಮಹಾಮಳೆ: ಅರಕಲಗೂಡಿನಲ್ಲಿ ಅತಿವೃಷ್ಟಿಗೆ ಭಾರೀ ಹಾನಿತಾಲೂಕಿನಲ್ಲಿ ಕಾವೇರಿ ಮತ್ತು ಹೇಮಾವತಿ ನದಿಗಳು ಮೈದುಂಬಿ ಪ್ರವಾಹ ಉಂಟುಮಾಡುವ ನಿಟ್ಟಿನಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಕೃಷಿ ಭೂಮಿಯಲ್ಲಿ ಕೈಗೊಳ್ಳಲಾಗಿರುವ ಅಡಿಕೆ, ತೆಂಗು, ಬಾಳೆ, ತಂಬಾಕು, ಮೆಕ್ಕೆಜೋಳ, ಶುಂಠಿ, ದ್ವಿದಳ ಧಾನ್ಯ ಬೆಳೆಗಳು ಜಲಾವೃತಗೊಂಡಿವೆ. ಇದರಿಂದ ಕೋಟ್ಯಾಂತರ ರು. ಹಾನಿ ಸಂಭವಿಸಿದೆ. ಮತ್ತೊಂದೆಡೆ ಅಧಿಕ ಮಳೆಯಿಂದ ಕೈಗೊಳ್ಳಲಾಗಿರುವ ಆಲೂಗಡ್ಡೆ, ರಾಗಿ ಮುಂತಾದ ತರಕಾರಿ ಬೆಳೆಗಳು ಸಂಪೂರ್ಣವಾಗಿ ನಾಶಹೊಂದಿರುವುದು ಕಂಡುಬಂದಿದೆ.