• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸರ್ಕಾರ ಬೀಳಿಸುವ ಯತ್ನಿಸಿದರೆ ಪ್ರತಿಭಟನೆ
ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸಿ ತೇಜೋವಧೆ ಮಾಡುವ ಕುತಂತ್ರ ಮಾಡಿ, ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೇ ವಿವಿಧ ಸಂಘಟನೆಗಳು ಸೇರಿ ಪ್ರತಿಭಟನೆ ಮಾಡಲು ಮುಂದಾಗುವುದಾಗಿ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಬೀರೇಗೌಡ ಎಚ್ಚರಿಸಿದರು.
ಚಿತ್ರಕಲಾ ಕ್ಷೇತ್ರವನ್ನೂ ಪ್ರೀತಿಸುವಂತೆ ಕಾರದ ಕಟ್ಟಿ ಸಲಹೆ
ಹಾಸನ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಿರ್ಮಲ ಕಲಾಶಾಲೆಯ ಹಳೆ ವಿದ್ಯಾರ್ಥಿಗಳಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿಮಕ್ಕಳಿಗೆ ಶಿಕ್ಷಣ ಎಂದರೆ ಎಂಜಿನಿಯರ್ ಮತ್ತು ವೈದ್ಯ ಕ್ಷೇತ್ರ ಅಷ್ಟೇ ಅಲ್ಲ. ಚಿತ್ರಕಲೆ ಕೂಡ ಅದ್ಭುತವಾದ ಒಂದು ಕ್ಷೇತ್ರ. ನಾವು ಅದನ್ನು ಎಷ್ಟು ಪ್ರೀತಿಸುತ್ತೇವೋ ಅಷ್ಟೆ ನಮಗೆ ಹೆಸರು, ಗೌರವ ತಂದುಕೊಡುತ್ತದೆ ಎಂದು ನಿರ್ಮಲ ಚಿತ್ರಕಲೆ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಆರ್‌.ಸಿ. ಕಾರದ ಕಟ್ಟಿ ತಿಳಿಸಿದರು.
ಅರಸೀಕೆರೆಗೂ ಮುನ್ನ ಚಿತ್ರದುರ್ಗ ತಲುಪಲಿದೆ ಎತ್ತಿನಹೊಳೆ ನೀರು
ಅರಸೀಕೆರೆ ಎತ್ತಿನಹೊಳೆ ಯೋಜನೆಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ತಾಲೂಕಿನಲ್ಲಿ ೯೮ ಕಿ.ಮೀ. ಪೈಪ್‌ಲೈನ್ ಮೂಲಕ ತಾಲೂಕಿನ ಗಡಿ ಗ್ರಾಮ ಹೆಬ್ಬನಹಳ್ಳಿಗೆ ತಲುಪಲಿದ್ದು, ಅಲ್ಲಿಂದ ತೆರೆದ ನಾಲೆಯ ಮೂಲಕ ಬೇಲೂರು, ಅರಸೀಕೆರೆ, ತಿಪಟೂರು ಮೂಲಕ ತುಮಕೂರು ಪ್ರವೇಶಿಸುವ ಎತ್ತಿನಹೊಳೆ ನೀರು ಒಟ್ಟಾರೆ ೨೭೦ ಕಿ.ಮೀ. ದೂರದವರೆಗೆ ತೆರೆದ ನಾಲೆಯ ಮೂಲಕ ಹರಿಯಲಿದೆ.ಎತ್ತಿನಹೊಳೆ ಕುಡಿಯುವ ನೀರು ಅರಸೀಕೆರೆ ತಲುಪುವ ಮೊದಲೇ ಚಿತ್ರದುರ್ಗ ತಲುಪಲಿದೆ.
ಒಳ ಮೀಸಲಾತಿ ಕುರಿತು ಸುಪ್ರೀಂ ಮಹತ್ವದ ತೀರ್ಪು
ಒಳಮೀಸಲಾತಿ ಕಲ್ಪಿಸುವ ಅಧಿಕಾರವನ್ನು ರಾಜ್ಯಸರ್ಕಾರಗಳಿಗೆ ನೀಡಿದೆ. ಈಗಲಾದರೂ ಪ. ಜಾತಿಗಳು ಪ್ರೀತಿ ಮತ್ತು ನಂಬಿಕೆಯಿಂದ ಐಕ್ಯ ಹೋರಾಟ ಮಾಡಬೇಕಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಒಳಮೀಸಲಾತಿ ಕಲ್ಪಿಸಬೇಕೆಂಬ ೨೦೨೪ರ ಆಗಸ್ಟ್ ೧ರ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ ಎಂದು ದಲಿತ ಮಾದಿಗ ಛಲವಾದಿ ಸಂಘಟನೆಗಳ ಒಕ್ಕೂಟ ಅಭಿಪ್ರಾಯಪಡುತ್ತದೆ ಹಾಗೂ ಈ ತೀರ್ಪನ್ನು ಸ್ವಾಗತಿಸುತ್ತದೆ ಎಂದು ದಲಿತ ಮಾದಿಗ ಛಲವಾದಿ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೃಷ್ಣದಾಸ್‌ ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ನಗುಮುಖದ ಸೇವೆ ನೀಡಿ
ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕರೆಯಲಾದ ತುರ್ತು ಸಭೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು, ಆಡಳಿತ ಅಧಿಕಾರಿಗಳು, ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ತುರ್ತಾಗಿ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಶಾಸಕ ಎಚ್ ಕೆ ಸುರೇಶ್ ತಿಳಿಸಿದರು. ಯಾವುದೇ ರೋಗಿಗಳು ಬಂದರೆ ಅವರಿಗೆ ನಗುಮುಖದಿಂದ ಸ್ವಾಗತ ಮಾಡಿದರೆ, ಅವರ ಅರ್ಧ ಕಾಯಿಲೆಯು ಗುಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಿಮಗೆ ಸೂಚನೆಯನ್ನು ನೀಡಲಾಗಿದೆ ಎಂದರು.
ಒಳ ಮೀಸಲಾತಿಗೆ ಸ್ವಾಗತಿಸಿ ಕೆನೆಪದರ ನೀತಿ ಜಾರಿಗೆ ವಿರೋಧ
ಒಳ ಮೀಸಲಾತಿಯನ್ನು ಕೂಡಲೇ ಅನುಷ್ಟಾನಗೊಳಿಸಬೇಕು. ಹಾಗೆಯೇ ಕೆನೆಪದರ ನೀತಿಯನ್ನು ಕೈಬಿಡಬೇಕು. ಈ ಕುರಿತು ಜಿಲ್ಲಾ ಮಟ್ಟದಲ್ಲಿ ವಿಚಾರ ಸಂಕಿರಣ ನಡೆಸಬೇಕು ಎಂದು ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಸಮಿತಿ ಒತ್ತಾಯಿಸಿದೆ.ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಗಾಗಿ ಹಿರಿಯರು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಒಂದು ಹಂತಕ್ಕೆ ತಲುಪಿದೆ ಎಂದು ವಕೀಲರಾದ ಗಂಗಾಧರ್‌ ಬಹುಜನ್ ಹೇಳಿದರು.
ರಾಜ್ಯ ಸೀನಿಯರ್‌ ಪವರ್‌ ಲಿಫ್ಟಿಂಗ್ ಸ್ಪರ್ಧೆ ಉದ್ಘಾಟನೆ
ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪವರ್ ಲಿಫ್ಟರ್ಸ್ ಸಂಸ್ಥೆ ಮತ್ತು ರಾಜ್ಯ ಪವರ್ ಲಿಫ್ಟರ್ಸ್ ಸಂಸ್ಥೆ ಮಂಗಳೂರು. ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೪೯ನೇ ಪುರುಷರ ಮತ್ತು ೪೧ನೇ ಮಹಿಳೆಯರ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯ ಉದ್ಘಾಟನೆಯನ್ನು ರಾಜ್ಯ ಲಿಫ್ಟರ್ಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಸತೀಶ್ ಕುದ್ರೋಳಿ ನಡೆಸಿದರು.
ಕೋಡಿಮಠದಲ್ಲಿ‌ ಶ್ರಾವಣಮಾಸ ಆಚರಣೆ
ಅರಸೀಕೆರೆ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದಲ್ಲಿ‌ ಆ.5ರಿಂದ ಸೆ.3ರವರೆಗೆ 2ನೇ ವರ್ಷದ ಶ್ರಾವಣ ಮಾಸದ ಶಿವಪೂಜಾ ಲಿಂಗಾನುಷ್ಠಾನ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಇವರ ಸಾನಿಧ್ಯದಲ್ಲಿ ಪೂಜಾ ಕೈಂಕರ್ಯ ಪ್ರತಿದಿನ ನಡೆಯಲಿದ್ದು, ಮಠದ ಉತ್ತರಾಧಿಕಾರಿ ಶ್ರೀ ಚೇತನ ಮರಿ ದೇವರು ಪೂಜಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಲಿದ್ದಾರೆ. ಮಠದ ಆವರಣದಲ್ಲಿರುವ ಶ್ರೀ ನೀಲಮಜ್ಜಯ್ಯ ಮತ್ತು ಶ್ರೀ ಶಿವಲಿಂಗಜ್ಜಯ್ಯ ಗದ್ದುಗೆಗಳಿಗೆ ಪ್ರತಿದಿನ ಅಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯ ನೆರವೇರಲಿವೆ.
ಪ್ರಕೃತಿ ವಿಕೋಪ ಪರಿಹಾರಕ್ಕೆ ಮನವಿ
ಬೇಲೂರು ತಾಲೂಕಿನ ಅರೇಹಳ್ಳಿ ಮಲೆನಾಡು ಭಾಗದಲ್ಲಿ ವರುಣನ ಆರ್ಭಟಕ್ಕೆ ಕಾಫಿ ಸೇರಿದಂತೆ ಇತರ ಬೆಳೆಗಳು ಹಾಳಾಗಿವೆ. ಇದರ ಜೊತೆ ಕಾಡಾನೆಗಳ ಹಾವಳಿಂದ ಭಯದ ವಾತಾವರಣ ಉಂಟಾಗಿದ್ದು ಸೂಕ್ತ ಪರಿಹಾರ ನೀಡುವಂತೆ ಕರ್ನಾಟಕ ಕಾಫಿ ಬೆಳೆಗಾರರ ಸಂಘ ಅರೇಹಳ್ಳಿ ವತಿಯಿಂದ ತಹಸೀಲ್ದಾರ್‌ ಮಮತಾ ಎಂ ಅವರಿಗೆ ಮನವಿ ಸಲ್ಲಿಸಲಾಯಿತು.
ಎಸ್ಸಿ ಎಸ್ಟಿ ಒಳ ಮೀಸಲಾತಿ ಉಪ ವರ್ಗೀಕರಣಕ್ಕೆ ಸುಪ್ರೀಂಕೋರ್ಟ್ ಅಸ್ತು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿ ಉಪ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪುನ್ನು ನೀಡಿದ್ದು, ಈ ನಿಟ್ಟಿನಲ್ಲಿ ಒಳ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿರುವುದು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಡಗೈ ಸಮುದಾಯ ಸುಮಾರು 30 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಾಲೂಕು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ. ಪಿ. ಚಂದ್ರಯ್ಯ ಹೇಳಿದರು.
  • < previous
  • 1
  • ...
  • 329
  • 330
  • 331
  • 332
  • 333
  • 334
  • 335
  • 336
  • 337
  • ...
  • 509
  • next >
Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved