ನಿವೃತ್ತ ಪ್ರಾಂಶುಪಾಲ ಎಚ್ ಆರ್ ಸ್ವಾಮಿಗೆ ಕಿರಂ ಪುರಸ್ಕಾರಬಾಳೆಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎಚ್ ಆರ್ ಸ್ವಾಮಿ ಕಿರಂ ಪುರಸ್ಕಾರ ಪುರಸ್ಕೃತರಾಗಿದ್ದು ಅವರ ಅಪಾರ ಶಿಷ್ಯ ವೃಂದ ಹಾಗೂ ಆತ್ಮೀಯ ಬಳಗ ಶುಭ ಕೋರಿದೆ. ಪ್ರಗತಿಪರ ಚಿಂತಕರು, ಪರಿಸರ ವೈಚಾರಿಕತೆ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿ ನೀತಿ ಹಾಗೂ ನಿಲುವುಗಳಿಂದ ಚಿರಪರಿಚಿತರಾಗಿರುವ ಇವರು, ಪ್ರಶಸ್ತಿ ಪುರಸ್ಕಾರಗಳು ನಮ್ಮ ಹಿರಿಮೆ- ಗರಿಮೆ ಹೆಚ್ಚಿಸುತ್ತವೆ ಎನ್ನುವುದಕ್ಕಿಂತ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಮತ್ತಷ್ಟು ತೊಡಗಿಕೊಳ್ಳುವಂತೆ ಪ್ರಯತ್ನಿಸುತ್ತವೆ ಎಂಬುದು ನನ್ನ ಭಾವನೆ ಎನ್ನುತ್ತಾರೆ.