ಬುಡಕಟ್ಟು ನಮ್ಮ ಮಾನವ ಕುಲದ ಮೂಲ ನೆಲೆ: ಸಾಹಿತಿ ಬನ್ನೂರು ರಾಜು ಬುಡಕಟ್ಟು ಅಂದರೆ ಒಗ್ಗಟ್ಟು, ಸಂಸ್ಕಾರ, ಸಂಸ್ಕೃತಿಯ ಪ್ರತೀಕ. ಇದು ಒಂದು ವಿಶಿಷ್ಟ ಮಾನವ ಜನಾಂಗ, ಮಾನವ ಕುಲದ ಅಸ್ಮಿತೆ. ಒಂದೇ ದೇವರು ಒಂದೇ ಧರ್ಮವನ್ನುಳ್ಳ ನಾಗರೀಕತೆ. ಅವರು ಕೊಟ್ಟ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲದರಲ್ಲೂ ಬುಡಕಟ್ಟಿನ ಕೊಡುಗೆಯಿದೆ.