ನನ್ನ ರಾಜಕೀಯಕ್ಕೆ ಹಳ್ಳಿಮೈಸೂರೇ ಕಾರಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಜಕೀಯವಾಗಿ ನಾನು ದೃಢವಾಗಿ ನಿಲ್ಲಲ್ಲು ಸಹಕರಿಸಿದ್ದಾರೆ. ಆ ದಿನಗಳನ್ನು ಎಂದಿಗೂ ಮರೆಯುವುದಿಲ್ಲ, ಶಕ್ತಿ ನೀಡಿದ ಮತದಾರರನ್ನು ಸದಾಕಾಲ, ನನ್ನ ಕಡೆ ಉಸಿರು ಇರುವ ತನಕ ಮರೆಯುವುದಿಲ್ಲ. ಕಡೆಯವರೆಗೂ ಅವರ ಸೇವೆಗೆ ಶ್ರಮಿಸುತ್ತೇನೆ’ ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ ತಿಳಿಸಿದರು. ಹೊಳೆನರಸೀಪುರದ ತಾಲೂಕಿನ ಹಳ್ಳಿಮೈಸೂರಿನಲ್ಲಿ ಆಯೋಜನೆ ಮಾಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.