ಅಗ್ನಿ ಆಕಸ್ಮಿಕದಲ್ಲಿ ಸುಟ್ಟುಹೋದ ತೋಟಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿಇತ್ತೀಚಿಗೆ ಕಾಫಿ ತೋಟಕ್ಕೆ ಬೆಂಕಿ ಬಿದ್ದು ಕೊಯ್ಲಿಗೆ ಬಂದಿದ್ದ ಕಾಫಿಗಿಡ, ಕಾಳುಮೆಣಸು, ಸಿಲ್ವಾರ್, ಸುಟ್ಟು ಕರಕಲಾಗಿದ್ದ ನಿಡುಗರಹಳ್ಳಿ ಗ್ರಾಮದ ರೈತ ಸೋಮಶೇಖರ್ ತೋಟಕ್ಕೆ ಶಾಸಕ ಸಿಮೆಂಟ್ ಮಂಜುನಾಥ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.