ಸಕಲೇಶಪುರ ವಿಜಯಪುರ ಬಸ್‌ಗೆ ಶಾಸಕ ಮಂಜು ಚಾಲನೆಸಕಲೇಶಪುರದಿಂದ ವಿಜಯಪುರಕ್ಕೆ ಆರಂಭವಾಗಿರುವ ನೂತನ ಬಸ್‌ಗೆ ಶಾಸಕರು ಹಸಿರು ಧ್ವಜ ತೋರಿಸುವ ಮುಖಾಂತರ ಚಾಲನೆ ನೀಡಿ ಮಾತನಾಡಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಹೊಸ ಬಸ್‌ನ್ನು ಸಕಲೇಶಪುರ ಡಿಪೋದಿಂದ ವಿಜಯಪುರಕ್ಕೆ ಬಿಡಲಾಗುತ್ತಿದೆ. ಈ ಬಸ್‌ನಿಂದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ, ವಿಜಯಪುರ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಪ್ರತಿ ದಿನ ಪಟ್ಟಣದಿಂದ ಮಧ್ಯಾಹ್ನ ೧೨.೩೦ರ ವೇಳೆಗೆ ಬಿಡುವ ಈ ಬಸ್ ಮರುದಿನ ಮುಂಜಾನೆ ೬ ಗಂಟೆಗೆ ವಿಜಯಪುರ ತಲುಪುತ್ತದೆ ಎಂದರು.