ಇಂದು ದುಡ್ಡಿಗೆ ಜನರಲ್ಲಿ ಸಮಸ್ಯೆ ಇಲ್ಲ ನಗುವಿಗೆ ಸಮಸ್ಯೆಬಸವಣ್ಣನವರು ಕಾಯಕವೇ ಕೈಲಾಸವೆಂದರು, ಕೈಲಾಸ ಕಾಣಬೇಕಾದರೇ ಶಿಸ್ತು, ಸಮಯ ಪ್ರಜ್ಞೆ, ನಿಷ್ಟೆ ಹಾಗೂ ತಾಳ್ಮೆ ಮುಖ್ಯವಾಗಿದೆ, ಇತ್ತೀಚಿನ ದಿನಗಳಲ್ಲಿ ಹಣದ ಹಿಂದೆ ಓಡುವವರ ಸಂಖ್ಯೆ ಹೆಚ್ಚಿದೆ. ಆದರೆ ಸೇವಾ ಮನೋಭಾವ ಕಾಣದಾಗಿದೆ. ಇಂದು ದುಡ್ಡಿಗೆ ಜನರಲ್ಲಿ ಸಮಸ್ಯೆ ಇಲ್ಲ, ಆದರೆ ನಗುವಿನ ಸಮಸ್ಯೆ, ನೆಮ್ಮದಿಯ ಬದುಕಿನ ಸಮಸ್ಯೆ ಹಾಗೂ ಅಸೂಯೆ ಸಮಸ್ಯೆ ಬಹಳವಾಗಿ ಕಾಡುತ್ತಿದೆ. ಇದು ತೊಲಗಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್ ಸಲಹೆ ನೀಡಿದರು.