• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ವಿಕಾಸಪರ್ವ ಸಾಮಾಜಿಕ ಜವಾಬ್ದಾರಿ ನೆನಪಿಸುವ ಚಲನಚಿತ್ರ
ವಿಕಾಸಪರ್ವ ಒಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದ್ದು, ಈ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ಕಮರ್ಷಿಯಲ್ ಆಗಿ ಹೇಳುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ವಿಶೃತ್ ನಾಯಕ್ ಅವರು ವಿಕಾಸ ಪರ್ವ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಜೊತೆಗೆ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಅರಸ್ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಎಂದರು. ಮನುಷ್ಯ ಸ್ವಲ್ಪ ವಿವೇಚನೆಯಿಂದ ನಡೆದುಕೊಂಡರೆ ಅದು ವಿಕಾಸಪರ್ವ ಆಗುತ್ತದೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಮಧ್ಯಮ, ವಯಸ್ಕರ ಸುತ್ತ ನಡೆಯುವ ಸಾಂಸಾರಿಕ ಕಥೆಯ ಜೊತೆಗೊಂದು ಮೆಸೇಜ್ ಈ ಚಿತ್ರದಲ್ಲಿದೆ. ಚಿತ್ರದ ಟೀಸರ್, ಟ್ರೇಲರ್, ಹಾಡುಗಳು ಈಗಾಗಲೇ ಕೇಳುಗರ, ನೋಡುಗರ ಮನ ಗೆದ್ದಿದ್ದು, ಚಿತ್ರದಲ್ಲಿ ಏನೋ ವಿಶೇಷವಿದೆ ಎಂಬ ಕಾತುರ ಹುಟ್ಟಿಸಿವೆ.
ಪರಮೇಶ್ವರ್‌ಗೆ ರಾಹುಲ್‌ ಗಾಂಧಿ ಮುಂಬಡ್ತಿ ನೀಡಿದ್ರೆ ನಾವೇನ್‌ ಮಾಡೋಕಾಗುತ್ತೆ
ಕಾಂಗ್ರೆಸ್ ಪಕ್ಷ ಎಂದರೇ ಹೈಕಮಾಂಡ್‌ನಿಂದ ನಿರ್ದೇಶನವಾಗುವ ಪಕ್ಷ. ಮುಂದಿನ ದಿನಗಳಲ್ಲಿ ಸಚಿವರಿಗೆ ಮುಂಬಡ್ತಿ ಮಾಡುವ ವಿಚಾರ ಹೈ ಕಮಾಂಡ್‌ಗೆ ಬಿಟ್ಟಿದ್ದು. ಯಾರಿಗೆ ಬೇಕಾದರೂ ಮುಂಬಡ್ತಿ ಕೊಡಲಿ. ಈ ಬಗ್ಗೆ ನನ್ನ ತಕರಾರಿಲ್ಲ. ರಾಹುಲ್ ಗಾಂಧಿಯವರು ಜಿ. ಪರಮೇಶ್ವರ್ ಅವರಿಗೆ ಮುಂಬಡ್ತಿ ಕೊಟ್ಟರೆ ಅದನ್ನು ತಪ್ಪಿಸಲು ನಮ್ಮಿಂದ ಸಾಧ್ಯಾನಾ! ಪರಮೇಶ್ವರ್ ಅವರಿಗೆ ಕೊಟ್ಟರೇ ಸಂತೋಷ ಎನ್ನುತ್ತಲೇ ಗೃಹ ಸಚಿವ ಪರಮೇಶ್ವರ್ ಪರ ಸಚಿವ ರಾಜಣ್ಣ ಬ್ಯಾಟ್ ಬೀಸಿದಲ್ಲದೇ ಮುಂಬಡ್ತಿ ವಿಚಾರವಾಗಿ ನಮ್ಮ ಹೋರಾಟ ಎಂದಿಗೂ ಇರುತ್ತದೆ ಎಂದರು.
ರಾಜ್ಯ ಮಟ್ಟಕ್ಕೆ ಮರಸು ಹೊಸಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು
ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಸ್ಥೆ ಹಾಸನ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಎಂಟೂ ತಾಲೂಕುಗಳಿಂದ ಗೈಡ್ಸ್‌ ತಂಡಗಳು ಭಾಗವಹಿಸಿದ್ದು, ಆಲೂರು ತಾಲೂಕಿನ ಮರಸು ಹೊಸಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗೈಡ್ಸ್ ಮಕ್ಕಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎತ್ತಿನಹೊಳೆಯಿಂದ ನೀರೆತ್ತಲು ಸರ್ಕಾರ ಯಶಸ್ವಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಪೂರ್ವ ನಿಗದಿಯಂತೆ ಎತ್ತಿನಹೊಳೆಯಿಂದ ನೀರೆತ್ತಲು ಸರ್ಕಾರ ಯಶಸ್ವಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. 

ನಿರ್ಲಕ್ಷ್ಯಕ್ಕೆ ನಲುಗುತ್ತಿರುವ ಸಕಲೇಶಪುರ ಪುರಭವನ!
ಮೂಲರೂಪಕ್ಕೆ ಧಕ್ಕೆ ಬರಬಾರದು ಎಂಬ ದಾನಿಗಳ ಪಟ್ಟು, ಕಟ್ಟಡ ನಿರ್ವಹಣೆಯಲ್ಲಿ ಪುರಸಭೆ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸಿಲುಕಿ ಐತಿಹಾಸಿಕ ಹಿನ್ನೆಲೆಯ ಸಕಲೇಶಪುರದ ಪುರಭವನ ನಲುಗುತ್ತಿದೆ.
ಹೊಳೆನರಸೀಪುರದಲ್ಲಿ ಗಣಿಗಾರಿಕೆ ಸ್ಪೋಟಕ್ಕೆ ಸರ್ಕಾರಿ ಕಟ್ಟಡ ಬಿರುಕು: ವರದಿ ನಂತರ ಕ್ರಮ ಎಂದ ಶಾಸಕ ಮಂಜು
ಹೊಳೆನರಸೀಪುರದ ಪಶು ಆಸ್ಪತ್ರೆಯ ಕಟ್ಟಡವು ಪಕ್ಕದ ಗ್ರಾಮ ಒಂದರಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಸ್ಫೋಟದಿಂದಾಗಿ ಸೀಳು ಬಿಟ್ಟಿದೆ. ಎಂಜಿನಿಯರ್‌ ಕಟ್ಟಡ ಸೀಳು ಬಿಟ್ಟಿರುವ ನಕಲು ಪ್ರತಿ ನೀಡಿದ ನಂತರ ಅಗತ್ಯ ಕ್ರಮಕ್ಕೆ ಸೂಚಿಸುವುದಾಗಿ ಎಂದು ಶಾಸಕ ಎ.ಮಂಜು ತಿಳಿಸಿದ್ದಾರೆ. ಹೊಳೆನರಸೀಪುರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನುಗ್ಗೇಹಳ್ಳಿ ಹಿರೇಕೆರೆ ಸಂಪೂರ್ಣ ಭರ್ತಿಗೆ ಆದ್ಯತೆ: ಶಾಸಕ ಸಿ.ಎನ್. ಬಾಲಕೃಷ್ಣ
ನಾನು ಕಳೆದ ವರ್ಷ ಕೊಟ್ಟ ಮಾತಿನಂತೆ ಮೊದಲ ಹಂತದಲ್ಲೇ ನುಗ್ಗೇಹಳ್ಳಿ ಹಿರೇಕೆರೆಗೆ ನೀರು ಹರಿಸಲಾಗುತ್ತಿದೆ. ಅದನ್ನು ಸಂಪೂರ್ಣ ಭರ್ತಿ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ನುಗ್ಗೇಹಳ್ಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯಮಟ್ಟದ ಕ್ರೀಡೆಯಲ್ಲಿ ಹಾಸನಕ್ಕೆ ಕೀರ್ತಿ ತನ್ನಿ: ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಮಂಜುಳ
ಉತ್ತಮ ತರಬೇತಿ ಪಡೆದು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟದಲ್ಲಿ ಪಾಲ್ಗೊಂಡು ನಂತರ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಹಾಸನ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಮಂಜುಳ ಹೇಳಿದರು. ಹಾಸನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯಕ್ಕಾಗಿ ಮೊಬೈಲ್‌ನಿಂದ ದೂರವಿರಿ: ಪ್ರಾಂಶುಪಾಲ ಪ್ರಶಾಂತ್
ಮೊಬೈಲ್ ಬಳಕೆಯಿಂದ ದೂರವಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಪೂರ್ಣಪ್ರಜ್ಞ ವಿದ್ಯಾ ಕೇಂದ್ರದ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೇಳಿದರು. ಬೇಲೂರಿನಲ್ಲಿ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.
ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಹಿಂದೂ ದೇವಾಲಯಗಳ ಅರ್ಚಕರ ಸಂಘದ ಶ್ರೀಧರಮೂರ್ತಿ ಒತ್ತಾಯ
ಅರ್ಚಕರು ಮೃತರಾದರೆ ೨ ಲಕ್ಷ ರು. ಪರಿಹಾರ ಹಾಗೂ ಅರ್ಚಕರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡಬೇಕು ಎಂದು ಚನ್ನರಾಯಪಟ್ಟಣ ತಾಲೂಕು ಹಿಂದೂ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ ತಿಳಿಸಿದರು. ಬೆಂಗಳೂರಿನಲ್ಲಿ ಆಯುಕ್ತ ಡಾ.ವೆಂಕಟೇಶ್ ಅವರನ್ನು ಭೇಟಿ ಮಾಡಿ ಮಾತನಾಡಿದರು.
  • < previous
  • 1
  • ...
  • 309
  • 310
  • 311
  • 312
  • 313
  • 314
  • 315
  • 316
  • 317
  • ...
  • 509
  • next >
Top Stories
ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಜಾತಿ ಸಮೀಕ್ಷೆಗೆ ಆನ್‌ಲೈನ್‌ನಲ್ಲೂ ಭಾಗಿ ಅವಕಾಶ
ರಾಜ್ಯದ ಉತ್ತರ ಒಳನಾಡಲ್ಲಿ ಮೂರು ದಿನ ಮಳೆ ಸಾಧ್ಯತೆ : ವಾಯುಭಾರ ಕುಸಿತ
ತಲೆಬುರುಡೆ ತಂದಿದ್ದು ವಿಠಲಗೌಡ: ಕೋರ್ಟಲ್ಲಿ ಸಾಕ್ಷ್ಯ
5 ತಿಂಗಳಿಂದ ಮದ್ಯ ಮಾರಾಟ ಕುಸಿತ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved