ಶಿಫಾರಸು ಇಲ್ಲದೆ ಬರುವವರಿಗೆ ಮೊದಲ ಆದ್ಯತೆ ಕೊಡಿ ಶಿಫಾರಸು ಹಾಗೂ ಪರಿಚಯವನ್ನು ಹೇಳಿಕೊಂಡು ಸರ್ಕಾರಿ ಕಚೇರಿಗೆ ಬರುವ ಜನರ ಕೆಲಸ ಕಾರ್ಯಗಳು ಒಂದು ವಾರ ತಡವಾದರೂ ಪರವಾಗಿಲ್ಲ, ಯಾವುದೇ ಶಿಫಾರಸುಗಳೂ ಇಲ್ಲದಂತೆ ಕಚೇರಿಗೆ ಬರುವ ಸಾಮಾನ್ಯ ಜನರಿಗೆ ಮೊದಲ ಆದ್ಯತೆ ನೀಡಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕೆಂದು ಸಂಸದ ಶ್ರೇಯಸ್ ಪಟೇಲ್ ಸೂಚಿಸಿದ್ದಾರೆ. ಗ್ರಾಮೀಣ ಜನರಿಗೆ ಕಚೇರಿಗೆ ಅಲೆದಾಡಿಸದೆ, ಭ್ರಷ್ಟಾಚಾರ ರಹಿತವಾಗಿ ಜನರ ಕೆಲಸಗಳನ್ನು ಕಾನೂನಿನಂತೆ ಸಮರ್ಪಕವಾಗಿ ಮಾಡಿಕೊಡಬೇಕೆಂದು ತಿಳಿ ಹೇಳಿದ್ದಾರೆ.