ಕಾವೇರಿ ನದಿ ಸ್ವಚ್ಛತೆಗಾಗಿ ಶಾಸಕ ಮಂಜುಗೆ ಮನವಿನದಿಯಲ್ಲಿ ರಾಶಿ ರಾಶಿ ಬಟ್ಟೆಗಳನ್ನು ಹಾಕಿರುವುದರ ಜೊತೆಗೆ ನದಿಯಲ್ಲಿ ಮಲ -ಮೂತ್ರ ವಿಸರ್ಜನೆ ಮಾಡುವುದರಿಂದ ವಾಸನೆಗೆ ನದಿಗೆ ಬರುವ ಭಕ್ತರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ವರ್ಷವಿಡೀ ಬೇರೆ ಬೇರೆ ಗ್ರಾಮಗಳಿಂದ ದೇವರನ್ನು ಲಾರಿ, ಟ್ರ್ಯಾಕ್ಟರ್, ಆಟೋಗಳಲ್ಲಿ ತಂದು ಪೂಜೆ ನಂತರ ನದಿಯಲ್ಲಿ ಬಾಳೆಕಂದು, ಮಾವಿನಸೊಪ್ಪು, ಊಟದ ತಟ್ಟೆಗಳು ಮುಂತಾದ ತ್ಯಾಜ್ಯಗಳನ್ನು ನದಿಯಲ್ಲಿ ಬೀಸಾಡುತ್ತಾರೆ.