ಅರಸೀಕೆರೆ, ಹಾಸನದಲ್ಲಿ ಭಾರಿ ಮಳೆ: ಬುಡ ಸಮೇತ ಕಿತ್ತ ತೆಂಗಿನ ಮರಗಳುಹಾಸನ, ಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಶುಕ್ರವಾರ ಸಂಜೆ ಮಿಂಚು, ಗುಡುಗು ಹಾಗೂ ಭಾರಿ ಗಾಳಿ ಸಹಿತ ಮಳೆಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಕಾಟೀಕೆರೆ ಗ್ರಾಮದ ಭೈರೇಶ್ ಎನ್ನುವವರ ಫಸಲು ಭರಿತ ಬಾಳೆ ತೋಟ ಸಂಪೂರ್ಣ ನೆಲ ಕಚ್ಚಿದ್ದರೆ, ತೆಂಗಿನ ಮರಗಳು ಧರೆಗುರುಳಿವೆ.