ಹಾಸನ ಜಿಲ್ಲೆಗೆ ಕಳಂಕ ತರುವ ಟ್ರೋಲ್ ಮಾಡಬೇಡಿ: ಬಾಳ್ಳುಗೋಪಾಲ್ಶಿಲ್ಪಕಲೆಗಳ ತವರೂರಾದ ಹಾಸನ ಜಿಲ್ಲೆಗೆ ತನ್ನದೆಯಾದ ಹೆಸರಿದೆ. ಇಂತಹ ಜಿಲ್ಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿಚಾರಗಳ ಟ್ರೋಲ್ ಮಾಡಿದ ವಿಡಿಯೋ ಮತ್ತು ಸಂದೇಶವನ್ನು ರವಾನೆ ಮಾಡುವ ಮೂಲಕ ಹಾಸನಕ್ಕೆ ಕಳಂಕ ತರುವ ಕೆಲಸ ಮಾಡಲಾಗುತ್ತಿದ್ದು, ಕೂಡಲೇ ನಿಲ್ಲಿಸುವಂತೆ ಕನ್ನಡಪರ ಹೋರಾಟಗಾರ ಬಾಳ್ಳುಗೋಪಾಲ್ ಮನವಿ ಮಾಡಿದರು.