ಮಹಾಗಣಪತಿ ಭವನದಲ್ಲಿ ಗಣಪತಿ ಪ್ರತಿಷ್ಠಾಪನೆಶ್ರಿ ಮಹಾಗಣಪತಿ ಭವನದಲ್ಲಿ ನಿರ್ಮಿಸಿರುವ ಎಂಟು ಅಡಿ ಎತ್ತರದ ಜೇಡಿಮಣ್ಣಿನ ಗಣೇಶ ಮೂರ್ತಿ ಮುಂಭಾಗದಲ್ಲಿ ಬಾಳೆಕಂದು ನೆಟ್ಟು ಅದರ ಮುಂದೆ ಕನ್ನಡಿಯನ್ನು ಇಡಲಾಯಿತು. ಕಲಾವಿದ ಕೆ.ಸತೀಶ್ ಹಾಗೂ ಅರ್ಚಕ ಶ್ರೀಷಾಚಾರ್ ಅವರ ನೇತೃತ್ವದಲ್ಲಿ ಶ್ರೀ ಗಣೇಶಮೂರ್ತಿಗೆ ಕಣ್ಣು ಬರೆಯುತ್ತಿದ್ದಂತೆ ಪರದೆ ಸರಿಸಿ, ಬಾಳೆಕಂದು ಕತ್ತರಿಸಿ, ಕನ್ನಡಿಯಲ್ಲಿ ಗಣೇಶ ಮೂರ್ತಿಯನ್ನು ತೋರಿಸಿ, ನಂತರ ಸಾರ್ವಜನಿಕರಿಗೆ ಶ್ರೀ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಶ್ರೀ ಸ್ವಾಮಿಯ ಬೆಳ್ಳಿಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ ನೆರವೇರಿಸಿ, ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿ, ಮಂಗಳಾರತಿ ನಂತರ ತೀರ್ಥ, ಮೋದಕ ಹಾಗೂ ಸಕ್ಕರೆ ಮಿಶ್ರಿತ ಕಡ್ಲೆಹಿಟ್ಟು ಪ್ರಸಾದ ವಿತರಿಸಲಾಯಿತು.