ಅಳಿವಿನತ್ತ ಸಕಲೇಶಪುರದ ವಾರದ ಸಂತೆಬಡ, ಮಧ್ಯಮವರ್ಗದವರನ್ನು ಗುರಿಯಾಗಿಸಿಕೊಂಡು ಒಂದೇ ಸೂರಿನಡಿ ಸಕಲ ವಸ್ತುಗಳು ಅಗ್ಗದ ದರಕ್ಕೆ ದೊರಕಿಸುವ ಉದ್ದೇಶದಿಂದ ಆರಂಭವಾದ ವಾರದ ಸಂತೆ ಎಂಬ ಪೂರ್ವಿಕರ ಪರಿಕಲ್ಪನೆ, ವ್ಯಾಪಾರಿಗಳ ಅತಿಯಾಸೆ ಜನರ ಸೋಮಾರಿತನದ ಫಲವಾಗಿ ಅವನತಿಯತ್ತ ಸಾಗುತಿದೆ. ಬೀದಿಬದಿಯ ವ್ಯಾಪಾರಕ್ಕೆ ಸಂತೆ ವ್ಯಾಪಾರಿಗಳು ಮುಂದಾಗಿರುವುದರಿಂದ ಪಟ್ಟಣದ ವಾರದ ಸಂತೆ ಅಳಿವಿನತ್ತ ಸಾಗುತ್ತಿದೆ. ಸಂತೆ ನಡೆಯುವ ಪ್ರದೇಶದಲ್ಲಿ ಸಕಲ ಮೂಲಭೂತ ಸೌಕರ್ಯ ಒದಗಿಸಲಾಗಿದ್ದು ಎಪಿಎಂಸಿ ಅಧಿಕಾರಿಗಳು ಹಿಂದಿನ ಪುರಸಭೆಗೆ ಹೋಲಿಸಿದರೆ ಅತ್ಯಂತ ಕಡಿಮೆ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಆದರೂ, ಪಟ್ಟಣದ ವಾರದ ಸಂತೆ ಕ್ಷೀಣಿಸುತ್ತಾ ಸಾಗಿದೆ.