ಗಾಣಿಗರ ಯುವಕ ಸಂಘದಿಂದ ಕನ್ನಡರಾಜ್ಯೋತ್ಸವಗಾಣಿಗರ ಯುವಕ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇಲ್ಲಿನ ಗಾಣಿಗರ ಬೀದಿಯಲ್ಲಿರುವ ಧ್ವಜಸ್ತಂಭದಲ್ಲಿ ಕನ್ನಡ ಧ್ವಜ ಹಾರಿಸುವ ಮೂಲಕ ಜನಾಂಗದ ಯುವಕರು ನಾಡು ನುಡಿಯ ಬಗ್ಗೆ ಗೌರವ ಸಮರ್ಪಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕೇವಲ ಕನ್ನಡ ರಾಜ್ಯೋತ್ಸವ ದಿನದಂದು ಕಾರ್ಯಕ್ರಮ ರೂಪಿಸದೆ ನಾಡು, ನುಡಿ, ಜಲ, ಭಾಷೆಗಾಗಿ ವರ್ಷಪೂರ್ತಿ ಕನ್ನಡ ಸೇವೆಗಾಗಿ ಮುಡಿಪಾಗಿಟ್ಟಗ ಮಾತ್ರ ರಾಜ್ಯೋತ್ಸವ ಅರ್ಥಪೂರ್ಣವಾಗಿರುತ್ತದೆ ಎಂದರು.