ಗ್ರಾಮೀಣರಿಂದ ರಾಜಕೀಯದಲ್ಲಿ ಬದಲಾವಣೆ ಸಾಧ್ಯ: ಹಿ.ಶಿ.ರಾಮಚಂದ್ರೇಗೌಡರಾಜಕೀಯ ಬದಲಾವಣೆ ಕೂಡ ಆಗಬೇಕಾದರೆ ಅದು ಗ್ರಾಮೀಣ ಜನರಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಪ್ರೊ. ಹಿ.ಶಿ.ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು. ಹಾಸನದಲ್ಲಿ ಆಯೋಜಿಸಿದ್ದ ಜಾನಪದ ಗೀತಗಾಯನ ಮತ್ತು ಸಂಗೀತ ಸಂಭ್ರಮದಲ್ಲಿ ಮಾತನಾಡಿದರು.