ಹೆಚ್ಚುತ್ತಿರುವ ಅಪರಾಧ ಕೃತ್ಯ ಖಂಡಿಸಿ ಮೌನ ಪ್ರತಿಭಟನೆಹಾನಗಲ್ಲ ತಾಲೂಕಿನಲ್ಲಿ ಹಾಡು ಹಗಲೇ ಕೊಲೆ ಸೇರಿದಂತೆ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ತಾಲೂಕು ಆಡಳಿತ ಸಂಪೂರ್ಣವಾಗಿ ಕುಸಿದು, ಸಾರ್ವಜನಿಕರು ಆತಂಕ ಭಯದಲ್ಲಿ ಜೀವನ ನಡೆಸುವ ದುಸ್ಥಿತಿ ನಿರ್ಮಾಣವಾಗಿ, ಮಾನವ ಕುಲ ತಲೆ ತಗ್ಗಿಸವ ಹಾಗಾಗಿರುವುದನ್ನು ಪ್ರತಿಭಟಿಸಿ ಮೌನ ಮೆರವಣಿಗೆ ಮೂಲಕ ಮಹಾತ್ಮಾಗಾಂಧಿ ವೃತ್ತದಲ್ಲಿ ತಾಲೂಕು ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.