ಬಹುಮುಖ ವ್ಯಕ್ತಿಗಳಲ್ಲಿ ಬಸವೆಣೆಪ್ಪ ಗೌರಿಮನಿ ಅಸಾಮಾನ್ಯ ವ್ಯಕ್ತಿ-ಸಂಸದ ಬೊಮ್ಮಾಯಿಕೆಲವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಹುಟ್ಟಿ, ತಮ್ಮ ಪ್ರಾಮಾಣಿಕತೆ, ಸಮಾಜಮುಖಿ ಕಾರ್ಯ ಹಾಗೂ ಸರಳ ಸಾತ್ವಿಕ ಗುಣಗಳಿಂದ ಅಸಾಮಾನ್ಯ ವ್ಯಕ್ತಿಗಳಾಗುತ್ತಾರೆ. ರಾಜಕೀಯದಲ್ಲಿದ್ದೂ ಅಜಾತಶತ್ರುಗಳು ಎಂದೆನಿಸುವುದು ವಿರಳಾತಿ ವಿರಳ, ಅಂಥ ಬಹುಮುಖ ವ್ಯಕ್ತಿಗಳಲ್ಲಿ ಬಸವೆಣೆಪ್ಪ ಗೌರಿಮನಿ ಅಸಾಮಾನ್ಯ ವ್ಯಕ್ತಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.