ಮಳೆಯಬ್ಬರಕ್ಕೆ ಕಂಗಾಲಾದ ಜನತೆ, ನಗರಸಭೆ ಅವ್ಯವಸ್ಥೆ ಅನಾವರಣಹಾವೇರಿ ಜಿಲ್ಲಾದ್ಯಂತ ಗುರುವಾರ ಬೆಳಗಿನ ಜಾವ ಸುರಿದ ಭಾರೀ ಮಳೆಗೆ ಜನ ಕಂಗಾಲಾಗಿದ್ದು, ಬಾಲಕನೊಬ್ಬ ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲಾ ಕೇಂದ್ರದಲ್ಲಿ ಸಂಭವಿಸಿದೆ. ನಗರದ ಪ್ರಮುಖ ರಸ್ತೆಗಳು ಹಳ್ಳದಂತೆ ಹರಿದಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ನಿದ್ದೆಗೆಡುವಂತೆ ಮಾಡಿದೆ.