ರಾಣಿಬೆನ್ನೂರಿನ ಪೊಲೀಸ್ ವಸತಿಗೃಹಗಳ ಕಾಮಗಾರಿ ಕಳಪೆ: ಕ್ರಮಕ್ಕೆ ಆಗ್ರಹಕಟ್ಟಡದ ಕೆಲಭಾಗಗಳಲ್ಲಿ ಪ್ಲಾಸ್ಟರ್ ಮಾಡಲಾಗಿದ್ದು, ಕೆಲವು ಕಡೆ ಬಿರುಕು ಕಂಡುಬಂದಿದೆ. ಇದಲ್ಲದೆ ಈಗಾಗಲೇ ನಿರ್ಮಾಣಗೊಂಡು ಕಳೆದ ವರ್ಷ ಉದ್ಘಾಟನೆಯಾಗಿರುವ ಎರಡು ಹಂತದ ಬೃಹತ್ ಕಟ್ಟಡಗಳಲ್ಲಿ ಅಲ್ಲಲ್ಲಿ ಬಿರುಕು ಉಂಟಾಗಿದ್ದು, ನೀರು ಬಸಿಯುತ್ತಿದೆ ಎಂದು ನಗರಸಭಾ ಸದಸ್ಯೆ ಕಸ್ತೂರಿ ಚಿಕ್ಕಬಿದರಿ ಆರೋಪಿಸಿದರು.